ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೋವುಗಳೇನೇ ಬರಲಿ ಸಾಗುವ ಹಾದಿಯಲಿ/
ಸರಿಸಿ ನಡೆಯೋಣ ಎದೆಗುಂದದಂತೆ..
ಮನದ ಕೋಗಿಲೆಯ ದನಿ ಕುಂದದಿರಲೆಂದೆಂದೂ/
ಮತ್ತೆ ಚಿಗುರಲಿ ಕನಸು ಚೈತ್ರದಂತೆ…

ನೀನೊಂದು ಕುಳಿತಾಗ ಜಗವೇ ನಿಂತಂತೆನಗೆ/
ಕಣ್ಣಂಚಿನ ಮಿಂಚು ಮಾಸದಿರಲಿ….
ತಿಳಿ ಬಾನಿನಂದದಿ ಹಗುರವಾಗಿರು ಗೆಳತಿ
ಹವಳದ ತುಟಿಗಳು ಮುದುಡದಿರಲಿ..

ಈ ಭುವಿಯೆ ಸ್ವರ್ಗ ನೀನೆನ್ನ ಜೊತೆಗಿರಲು
ಹೃದಯ ನಂದನದಲ್ಲಿ ಅರಳಿ ನಿಂತಿರುವೆ….
ಸಖಿ ನೀನೇ ದೇವತೆ ನಾ ನಿನ್ನ ಪೂಜಾರಿ
ಅನವರತ ಮನವಿಟ್ಟು ಆದರಿಸುವೆ..,…

ನೂರಾರು ಕನಸುಗಳು ನಮಗಾಗಿ ಕಾಯುತಿವೆ
ಪಂಚಮ ವೇದಕೆ ವೇದಿಕೆ ಈ ಬದುಕು…
ಆಡೋಣ ಹಾಡೋಣ ಸರಸ ಸಮ್ಮೇಳನದಿ
ಪಂಚಭೂತ ಸಾಕ್ಷಿಯಲಿ ಹೊಮ್ಮಲಿ ಹೊಸ ಬೆಳಕು

About The Author

Leave a Reply

You cannot copy content of this page

Scroll to Top