ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲ ಬಿಟ್ಟು ಸಿದ್ದ
ಮಧ್ಯರಾತ್ರಿಯಲ್ಲಿ ಹೊರಟ
ಅರಮನೆಯ ಸಕಲ
ಐಶ್ವರ್ಯವ ಮರೆತ
ಜ್ಞಾನದ ಬೆಳಕು ಪಡೆದ
ಸಿದ್ಧ ಬುದ್ಧನಾದ
ಬುದ್ಧನಾಗಿ ಪ್ರಬುದ್ಧನಾಗಿ
ಜಗದ ಬೆಳಕಾದ

ಪೂರ್ಣಮಿಯ ಬೆಳಕಲ್ಲಿ
ಬೆಳಕಾಗಿ ಹೋದ
ಶಾಂತಿಯಿಂದ ಬುದ್ಧ
ಎಲ್ಲವನ್ನು ಪಡೆದ
ಪಡೆದ ಜ್ಞಾನವನ್ನೆಲ್ಲ
ಜನರಿಗೆ ಧಾರೆ ಎರೆದ

ಜ್ಞಾನ ದೀಪವ ಬೆಳಗಿಸಿ
ಅಜ್ಞಾನವ ದೂರಸರಿಸಿದ
ಶಾಂತಿದೂತನಾಗಿ ಜಗದ
ಕಣ್ಣ ತೆರೆದ
ಬುದ್ಧನ ನಗು ಜಗವ ಬೆಳಗಲಿ
ಶಾಂತಿ ನೆಮ್ಮದಿ ಜಗದಿ ಉಳಿಯಲಿ

ನಮ್ಮ ಮನದಲ್ಲಿಯ ರಾಕ್ಷಸ
ಭಾವ ಅಳಿಯಲಿ
ಶಾಂತಿ ಸೌಹಾರ್ದತೆ
ಎಲ್ಲೆಡೆ ನೆಲೆಸಲಿ

ನಮ್ಮೊಳಗೂ ಒಬ್ಬ
ಬುದ್ಧ ಹುಟ್ಟಿ ಬರಲಿ
ನಾನು ನನ್ನದೆಂಬ
ಅಹಂಕಾರವ ತೊರೆಯಲಿ
ಎಲ್ಲರೂ ನಮ್ಮವರೇಂಬ
ಭಾವ ಬಿತ್ತಿ ಬೆಳೆಯಲಿಬೆಳೆಯಲಿ

ಕಷ್ಟಗಳಿಂದ ಮುಕ್ತಿಯ ಕೊಡಲಿ
ಪಂಚೇಂದ್ರಿಯಗಳ ಹಿಡಿತ
ನಮ್ಮೊಳಗಿರಲಿ
ದ್ವೇಷ ಅಸೂಯೆ ಮೋಹ
ಮದ ಮತ್ಸರವ ನಮ್ಮಿಂದ ದೂರ ತಳ್ಳಲಿ

About The Author

4 thoughts on “ನಾಗರಾಜ ಜಿ. ಎನ್. ಬಾಡ ಕವಿತೆ-ಪೂರ್ಣಮಿಯ ಬೆಳಕಲ್ಲಿ”

  1. ಬುದ್ಧನ ಜೀವನ ಜ್ಞಾನದ ದೀವಿಗೆ
    ಸುಂದರ ಕವನ ರಚನೆ ಸರ್

    Sripad Algudkar ✍️

  2. ಜಗಕೆ ಬೆಳಕು ಬುದ್ಧನ ನಗು. ಅದೊಂದು ನಿರಂತರ ಶಕ್ತಿ ಬದುಕಿಗೆ ಮತ್ತು ಬದುಕುವ ಭಾವಕ್ಕೆ. ಪರಿಶುದ್ಧತೆ, ಶಾಂತಿ,ಸಹನೆ ನೆಮ್ಮದಿಯ ಪ್ರತಿರೂಪ. ಶಾಂತಿ ಬದುಕಿನ ಅನುರೂಪವಾಗಿ ನಿಂತ ಅನಂತತೆ ಎಲ್ಲರ ಬದುಕಿಗೆ ದಾರಿದೀಪ. ನಮ್ಮೊಳಗೆ ಒಳಿತಿನ ಭಾವ ಬೆಳೆಯಲಿ ಉಳಿದು ಉಪಕಾರಿಯಾಗಿ ಎನ್ನುವ ಸಾಲುಗಳು ಕವನದ ಸೂಕ್ಷ್ಮತೆ ಎನಿಸುತ್ತದೆ…… ಚೆನ್ನಾಗಿದೆ

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ.

Leave a Reply

You cannot copy content of this page

Scroll to Top