ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ರೈತಣ್ಣ
ಕಾವ್ಯ ಸಂಗಾತಿ ಮರುಳಸಿದ್ದಪ್ಪ ದೊಡ್ಡಮನಿ ರೈತಣ್ಣ ಮಳೆ ಭಾರದ ಒಡಲಿಗೂ ಭರವಸೆಯಬೀಜ ಬಿತ್ತಿತುತ್ತಿನ ಚೀಲ ತುಂಬಿಸಲುತನ್ನ ಕನಸು ಗಾಳಿಗೆ ತೂರಿನೆಲದವ್ವನ ನಂಬಿದವ ಯಾರ ಹಂಗು ಮೂಲಾಜಿಗುಭಾಗದೆ ನೆಗಿಲಲಿ ವಸುಧೆಯಬಗೆದು ಬೆವರ ಹನಿ ಉಣಿಸಿಸುಡುವ ಬಿಸಿಲಿಗೆ ಮೈ ತಾಗಿಸಿಉತ್ತಿ ಉಡಿಯ ತುಂಬಿಸಿ ಹಸಿವಿನ ಪರಿವೆಯ ಮರೆತುಹಸಿರು ಉಡಿಸುವ ಕಾಯಕದಿಬೆರೆತು ತನ್ನೆಲ್ಲ ವ್ಯಾಮೋಹವಮರೆತು ನೆಲದವ್ವನ ಹಸಿರಿಗೆಉಸಿರಾಗಿ ಜೀವ ತೇಯುತ ಲೋಕದ ಪರಿವೆ ಮರೆತುಕಾಯ ಕಾಯಕದಿ ಬೆರೆತುಜಗದೊಡಲ ತುಂಬಿಸಲುನಿತ್ಯ ಹೊತ್ತುಗಳ ಪರಿವೆಯಮರೆತು ದುಡಿವ ತ್ಯಾಗಿ ರೈತಣ್ಣ ಮರುಳಸಿದ್ದಪ್ಪ ದೊಡ್ಡಮನಿ
ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ರೈತಣ್ಣ Read Post »









