ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಸ ಋಷಿ ಕುವೆಂಪು ನೆನಪಿನಲ್ಲಿ,ಶ್ರೀವಲ್ಲಿ ಶೇಷಾದ್ರಿ ಕವಿತೆ-ಚೇತನ ಧಾರೆ ಕುವೆಂಪು

ಕುವೆಂಪು ನೆನಪಲ್ಲಿ

ಶ್ರೀವಲ್ಲಿ ಶೇಷಾದ್ರಿ

ಚೇತನ ಧಾರೆ ಕುವೆಂಪು

ರಸ ಋಷಿ ಕುವೆಂಪು ನೆನಪಿನಲ್ಲಿ,ಶ್ರೀವಲ್ಲಿ ಶೇಷಾದ್ರಿ ಕವಿತೆ-ಚೇತನ ಧಾರೆ ಕುವೆಂಪು Read Post »

ಕಾವ್ಯಯಾನ

ರಸ ಋಷಿ ಕುವೆಂಪು ನೆನಪಿನಲ್ಲಿ ಡಾ ಕಸ್ತೂರಿ ದಳವಾಯಿಕವಿತೆ-ವಿಶ್ವಮಾನವನಿಗೆ ನಮನ

ಕುವೆಂಪು ನೆನಪಿನಲ್ಲಿ

ಡಾ ಕಸ್ತೂರಿ ದಳವಾಯಿ

ವಿಶ್ವಮಾನವನಿಗೆ ನಮನ

ರಸ ಋಷಿ ಕುವೆಂಪು ನೆನಪಿನಲ್ಲಿ ಡಾ ಕಸ್ತೂರಿ ದಳವಾಯಿಕವಿತೆ-ವಿಶ್ವಮಾನವನಿಗೆ ನಮನ Read Post »

ಕಾವ್ಯಯಾನ

ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ

ಕುವೆಂಪು ನೆನಪಿನಲ್ಲಿ ನಳಿನಾ_ದ್ವಾರಕನಾಥ್ ಕುವೆಂಪು ಮಲೆನಾಡಿನ ಸೀಮೆಯಲ್ಲಿ ಹುಟ್ಟುಕರುನಾಡಿಗೆ ಸಾಹಿತ್ಯಸೇವೆ ಕೊಟ್ಟುಸಹ್ಯಾದ್ರಿಯ ಸೌಂದರ್ಯ ಸವಿಯುತಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರಭುವಿಯೊಳು ನಿಮ್ಮ ಹೆಸರು ಅಮರಶ್ರೀ ರಾಮಾಯಣ ದರ್ಶನಂ ಬರೆದರುಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ ಆಗು ನೀ ಅನಿಕೇತನನಮ್ಮೀ ನಾಡಿನ ಶ್ರೇಷ್ಠ ಕವಿಗೀ ನಮನವಿಶ್ವಮಾನವ ಸಂದೇಶದ ಅಭಿಯಾನವೈಚಾರಿಕತೆ ನಾಟಕಗಳೊಂದಿಗೆ ಯಾನ ರಾಷ್ಟ್ರ ಕವಿ ಎಂಬುವ ಬಿರುದಿನಿಂದಕುವೆಂಪು ಎಂಬ ಕಾವ್ಯನಾಮದಿಂದಹೆಸರಾದರು ಕನ್ನಡಮ್ಮನ ಕಂದನಾಗಿಉಸಿರಾಯಿತು ಕನ್ನಡವೇ ಜೀವವಾಗಿ ಮನುಜಮತ ವಿಶ್ವಪಥದ ಘೋಷಣೆಕನ್ನಡ ಕನ್ನಡಿಗರಿಗೆ ಮೊದಲ ಮನ್ನಣೆಭಾಷೆಯ ಮರೆತವನಾರು ಕನ್ನಡಿಗನಲ್ಲಕನ್ನಡಕ್ಕೆ ನಮಿಸಿ ನಡೆಯಲು ಸೋಲಿಲ್ಲ ಕವಿಶೈಲವಾಯ್ತು ಜನಿಸಿದ ಕುಪ್ಪಳ್ಳಿಯುಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿಯುಎಲ್ಲಾದರೂ ಇರು ನೀ ಎಂತಾದರೂ ಇರುಎಂದೆಂದಿಗೂ ಕನ್ನಡವಾಗಿರೆಂದು ಸಾರಿದರು ನಳಿನಾ_ದ್ವಾರಕನಾಥ್

ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ Read Post »

ಕಾವ್ಯಯಾನ

ರಸ ಋಷಿಕುವೆಂಪು ನೆನಪಿನಲ್ಲಿ,ಮಧು ವಸ್ತ್ರದ್

ರಸ ಋಷಿ ಕುವೆಂಪು ನೆನಪಿನಲ್ಲಿ ಮಧು ವಸ್ತ್ರದ್ ರಸ ಋಷಿಕುವೆಂಪು ಕುಪ್ಪಳ್ಳಿಯಲಿ ಜನಿಸಿ ಜನ ಮನ್ಮನೋಮಂದಿರದಿ ನೆಲೆಸಿಹರು ಈ ಕರ್ಮಯೋಗಿಅಪ್ಪಟ ಸಾಹಿತ್ಯಾಭಿಮಾನಿಗಳೆಲ್ಲ ಗೌರವದಿಂದ ನಮಿಸುವರಿವರಿಗೆ ನಿತ್ಯ ತಲೆಬಾಗಿ ಸಹ್ಯಾದ್ರಿ ಶೃಂಗದ ಹಸಿರ ಮಧ್ಯೆ ಹರಿವ ತೊರೆಯ ನೀರೊಳಾಡುತ ಬೆಳೆದ ಬಾಲಕಸಾಹಿತ್ಯದ ಆಗಸದಂಚಿನ ಆಚೆಯವರೆಗೂ ಬೆಳೆದು ನಿಂತ ತ್ರಿವಿಕ್ರಮ ರೂಪಿ ಸಾಧಕ.. ಕನ್ನಡಿಗರಿಗೆ ಶ್ರೀ ರಾಮಾಯಣ ದರ್ಶನಂ ಗ್ರಂಥದ ಕೊಡುಗೆ ನೀಡಿದ ರಸಋಷಿಹೊನ್ನಗಿಂಡಿಯಲಿ ಕಾವ್ಯಾಮೃತದ ಸವಿಯುಣಿಸಿ ಮನ ತಣಿಸಿದ ಕವಿ ಮಹರ್ಷಿ.. ಮಿಂಚುಳ್ಳಿ ನವಿಲು,ಮುಸ್ಸಂಜೆ ಮುಗಿಲು ಸಿಡಿಲು ಕಡಲು ವರ್ಣಿಸಿದ ನಿಸರ್ಗ ಕವಿಮಿಂಚುಬಳ್ಳಿ ಮಳೆಬಿಲ್ಲು ಹೊಳೆವ ಚುಕ್ಕಿ ಹೂವು ಹಕ್ಕಿಗಳಲಿ ಕಂಡಿದೆ ಇವರದೇ ಛವಿ.. ವಿಚಾರಕ್ರಾಂತಿಗೆ ಆಹ್ವಾನವಿತ್ತು ವಿಜ್ಞಾನದೀಪದಡಿ ಮುನ್ನಡೆಯಿರೆಂದ ಮಹಾಜ್ಞಾನಿಆಚಾರದಿ ಸಮನ್ವಯ,ಸರ್ವೋದಯ ಸಾಧಿಸುತ ಕಳೆದರು ಮೌಢ್ಯತೆಯ ಗ್ಲಾನಿ.. ಕಾನೂರು ಹೆಗ್ಗಡತಿಯ ಗಾಂಭೀರ್ಯ ಮಲೆಗಳಲಿ ಮದುಮಗಳ ಸೌಂದರ್ಯ ಅಪ್ರತಿಮನೂರು ರೂಪದ ಮೇರು ಭಾವದ ಕವಿಯಾಗಿ ಜನಮಾನಸದಿ ಮೆರೆದ ಪರಿ ಅತ್ಯುತ್ತಮ.. ಅಂಗಳದವರೆಯ ಚಪ್ಪರದಡಿಯಲಿ ತಿಳಿಸಿದರು ಮಂತ್ರಮಾಂಗಲ್ಯದ ಮಧುರ ದೀಕ್ಷೆಮಂಗಳದ ಮುಂಬೆಳಕನು ಹರಿಸುತ ಎಲ್ಲೆಡೆಯಲಿ‌ ನೀಡಿದರು ನಾಡಿಗೆ ದಿವ್ಯರಕ್ಷೆ.. ಕೊಳಲು ಪಾಂಚಜನ್ಯ ನಾದ ಹೊಮ್ಮಿಸುತ ಬೈಗು ಕೆಂಪಲಿ ಇತ್ತರು ಗಾನ ದರ್ಶನನೆಳಲು ಬಿಸಿಲು,ಜೀವನ ಸಂಜೀವನ ಬಾಂಧವ್ಯದ ಬಗ್ಗೆ ಕೊಟ್ಟರು ಮಾರ್ಗದರ್ಶನ.. ಅಸೀಮ ಭಕ್ತಿ ಉಕ್ಕಿಸುವ ಕಸ್ತೂರಿ ಕಂಪ ಸೂಸುವ ನಾಡಗೀತೆ ರಚಿಸಿದ ದಿವ್ಯಚೇತನವ್ಯೋಮದೆತ್ತರಕೇರಿದ ವಿಶ್ವಮಾನವಗೆ ಅರ್ಪಣ ನನ್ನೀ ಮನದಾಳದ ನುಡಿನಮನ.. ಮಧು ವಸ್ತ್ರದ್-ಮುಂಬಯಿ

ರಸ ಋಷಿಕುವೆಂಪು ನೆನಪಿನಲ್ಲಿ,ಮಧು ವಸ್ತ್ರದ್ Read Post »

You cannot copy content of this page

Scroll to Top