ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿಜಗುಣಿ ಎಸ್ ಕೆಂಗನಾಳ

ಕಾದಂಬರಿ

ಈ ಕಲ್ಲು ಕರಗಿ ನೀರಾಯಿತು
ಈ ಮನಸು ಅರಳಿ ಹೂವಾಯಿತು
ಈ ಬದುಕು ಬೆಳಗುವ ಜ್ಯೋತಿಯಾಗಿ
ಈ ನನ್ನ ಕನಸು ನನಸಾಗಿ ನಮ್ಮ ಬದುಕೆ
ಒಂದು ವಿಶ್ವ ದಾಖಲೆಯ ಕಾದಂಬರಿಯಂತೆ…!

ನನ್ನೋಳಗೆ ನೀನೊಂದು ಕಥೆಯಾಗಿ
ನಿನ್ನೋಳಗೆ ನಾನೊಂದು ಕವಿತೆಯಾಗಿ
ಸಂಸಾರವೆಂಬ ಜಟಕಾಬಂಡಿಗೆ ಬಿಡಿಸದ
ಬಂಧುವಾಗಿ ನಾವಿಬ್ಬರೂ ನಿಂತಿರಲು
ಈ ನಮ್ಮ ಬದುಕೆ ಒಂದು ಚಂದನವನದ
ನಂದಾ ದೀಪವಂತೆ…!

ನಾ ಕಂಡ ಮೊದಲ ಕನಸು ನೀನೇ
ನಾ ಕಂಡ ಕೊನೆಯ ಮನಸು ನೀನೇ
ನಾ ಬರೆದ ಮೊದಲ ಕವಿತೆಯು ನೀನೇ
ಆ ಕವಿತೆಯಲ್ಲಿ ಅರಳಿದ ಸಾಲುಗಳೇ
ಈ ನನ್ನ ಮನದಾಳದ ಮಾತುಗಳಂತೆ…!

ನನ್ನನ್ನು ನೀನು ನಂಬಿ ಬಂದಿರುವೆ
ನಿನ್ನನ್ನು ನಾನು ನನ್ನ ಮನೆಯ
ದೇವತೆಯಾಗಿ ಸ್ವೀಕಾರ ಮಾಡಿರುವೆ
ಈ ನನ್ನ ಮನೆಗೆ ನಂದಾ ದೀಪವಾಗಿ
ನೀನೇ ಬಂದಿರಲು ಈ ನಮ್ಮ ಬದುಕೆ ಒಂದು
ವಿಶ್ವ ದಾಖಲೆಯ ಕಾದಂಬರಿಯಂತೆ…!


ನಿಜಗುಣಿ ಎಸ್ ಕೆಂಗನಾಳ 

About The Author

Leave a Reply

You cannot copy content of this page

Scroll to Top