ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಂಡ್ರಾಯ್ಡ್.

ಡೋ.ನಾ.ವೆಂಕಟೇಶಆಂಡ್ರಾಯ್ಡ್

ಈಗ ಈ ಆಂಡ್ರಾಯ್ಡ್ ಬಂದ ಮೇಲೆ ಅಕ್ಷರಗಳೇ ಹಾಳಾಗಿ ಹೋದ್ವು !
ಜನರ ಕಣ್ಣಲ್ಲಿ ನನ್ನಕ್ಷರಗಳು ಹಾಳಾದಂತೆ ನಾ ನಿಜ್ವಾದ ಡಾಕ್ಟ್ರಾದೆ, ಬಹಳ ತಿಳಿದವನಾದೆ,ಮತ್ತುಬಹಳ
ಸೋಮಾರಿಯಾದೆ!

ಈ ಆಂಡ್ರಾಯ್ಡ್ಬಂದ ಮೇಲೆ
ನನ್ನ ಜೀವನದಲ್ಲಿ ಪ್ರಪಂಚವೇ ಸಂಕೀರ್ಣವಾಯಿತು. ವೈದ್ಯಕೀಯ ಸಾಹಿತ್ಯದ ಜೊತೆ ಜೊತೆ ವೈದ್ಯಕೀಯ ವಿಜ್ಞಾನ, ಮತ್ತು ಇತರೇ ವಿಜ್ಞಾನಗಳ ಪ್ರಾಕಾರ ಕೈಬೆರಳಲ್ಲೆ ಅರಳ ತೊಡಗಿದುವು!

ಮರೆತು ಹೋಗಿದ್ದ ಸಾಹಿತ್ಯ ದಿಗ್ಗಜಗಳು ಹೊಳೆಯ ತೊಡಗಿದರು .
ಆಗಿ ಹೋದ ಕಲೆಗಳು ಪುನಃ ಪುನಃ ಮನಸಲ್ಲಿ ಮೊಳೆಯ ತೊಡಗಿದುವು .ಕನಸಲ್ಲಿ ದಷ್ಟ ಪುಷ್ಟವೂ ಆಗ ತೊಡಗಿದುವು.

ನನ್ನ ಮೊಮ್ಮಕ್ಕಳು ಹೊಸ ಹೊಸ ಆಟಗಳಲ್ಲಿ ನಿಷ್ಣಾತರಾದರು. ನನ್ನ ಬಾಲ್ಯದ ಎಲ್ಲಾ ಆಟಗಳಿಗೂ ತಿಲಾಂಜಲಿ ಯಿಟ್ಟರು.

ಮತ್ತೆ ಈ ಆಂಡ್ರಾಯ್ಡ್ ಬಂದಂದಿನಿಂದ ಇಂದಿನ ತನಕದ ಘಟನೆಗಳ ಚಿತ್ರ ಅಂತ ರ್ಜಾಲದಲ್ಲಿ ದಾಖಲಾದವು .
ಆಂಡ್ರಾಯ್ಡ್ ಬಂದಮೇಲೆ ನನ್ನ ರೋಗಿಗಳು ನಿರರ್ಗಳವಾಗಿ ನನ್ನ (ನಿದ್ರೆ ಕೆಡಿಸಿದರು.) ಸಂಪರ್ಕಕ್ಕೆ ಬಂದರು.

ಈ ಫೋನ್ ಬಂದ ಮೇಲೆ ಕೈಲೆ
ಕಾಸಿದ್ರೆ ಸಾಕು.ಕೊಳ್ಳುವ ಕ್ರಿಯೆ ಚಿಟಿಕೆ ಹೊಡಿದಷ್ಟೆ ಸಕ್ರಿಯವಾಯಿತು(ಬ್ಯಾಂಕ್ ಬ್ಯಾಲೆನ್ಸ್ ಸಪೂರವಾಯಿತು)

ಪಟ್ಟಿ ಉದ್ದ. ದುರ್ಗಣಗಳೂ ಮೊಳೆತಿವೆ. ಇರಲಿ ನಿಗಾ ನಿನಗಿಂತ ಕಿರಿಯ ಇದ ಉಪಯೋಗಿಸುವಲ್ಲಿ.
ಇರಲಿ ನಿಗಾ ಪ್ರಪಂಚದ
ವ್ಯವಹಾರಗಳಲ್ಲಿ .
ತಿಳಿದಷ್ಟೂ ತಿಳಿಯ ಬೇಕಾದ್ದು ಬಹಳಿರುವ ,ಬದುಕಿದಷ್ಟೂ ಸಾವಿಗೆ ಹತ್ತಿರವಾಗುವ ಬದುಕಿನ ಬವಣೆಯ ತಿಳಿದಷ್ಟೂ ಅಸಹಾಯಕನಾಗುವ ಪರಿಯಲ್ಲಿ!


ಡಾ.ಡೋ.ನಾ.ವೆಂಕಟೇಶ

About The Author

9 thoughts on “ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್”

  1. Andriod ಆಗಮನದ ನಂತರದ ಪರಿಣಾಮಗಳ ಮೇಲೆ ನಿಮ್ಮ ಹಾಡು ತುಂಬಾ ನೈಜವಾಗಿದೆ.
    ದೀಪಾವಳಿಯ ಶುಭಾಶಯಗಳು

Leave a Reply

You cannot copy content of this page

Scroll to Top