ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಮತಿ ಕೃಷ್ಣಮೂರ್ತಿ

ಹೊಸ ಕವಿತೆ

ಕತ್ತಲ ಪರದೆ ಮೆತ್ತನೆ ಸರಿಯಲು
ಬಣ್ಣ ಹಾಕುತಿವೆ ಪಾತ್ರಗಳು
ಅಂಕದ ಮೇಲೆ ಹೃನ್ಮನ ಸೆಳೆಯಲು
ತೊಟ್ಟಿವೆ ನಾನಾ ವೇಷಗಳು

ಸೋಜಿಗವೆಂದರೆ ವೇದಿಕೆ ಬಯಸರು
ಬಯಲಿನ ನೈಜ ಕಲಾವಿದರು
ಸಹಜತೆ ನಟಿಸಿ ಲೋಕವ ಸೆಳೆಯಲು
ನಿತ್ಯವೂ ಶ್ರಮಿಸುವ ಕೋವಿದರು

ಜೀವನವೆಂಬ ನಾಟಕ ರಂಗದಿ
ಮುಖ್ಯ ಭೂಮಿಕೆಯೇ ತಾವಾಗಿ
ಪೋಷಕ ಪಾತ್ರವ ಮಾಡಲೊಪ್ಪದೆ
ಕಥೆಯ ರೂಪವೇ ಬದಲಾಗಿ

ನಿತ್ಯ ನಡೆಯುವ ಬಯಲಿನಾಟಕೆ
ನಾವೂ ನೀವೂ ಪ್ರೇಕ್ಷಕರು
ನಡುವೆ ಅಡಗಿರುವ ನಟರನು
ಹುಡುಕಲು ವಿಫಲರಾದ ಅಮಾಯಕರು


ಸುಮತಿ ಕೃಷ್ಣಮೂರ್ತಿ

About The Author

2 thoughts on “ಸುಮತಿ ಕೃಷ್ಣಮೂರ್ತಿಯವರ ಹೊಸ ಕವಿತೆ”

  1. ಸೂಪರ್, ಸುಮತಿ. ನಿಮ್ಮ ಹೊಸ ಕಾವ್ಯ, ಭಾವ ಯಾನಕ್ಕೆ ಶುಭಾಶಯಗಳು

Leave a Reply

You cannot copy content of this page

Scroll to Top