ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶ್ರೀಪಾದ ಆಲಗೂಡಕರ

ಗಜಲ್

ದತ್ತ ಪದ :- ಗೆಳೆತನ

ಅಳಿಯದ ಗೆಳೆತನಕೆ ಅಕ್ಕರೆಯ ಸವಿಯ ಎರೆಯಬೇಕಿದೆ ಇಂದು
ಉಳಿಸುವ ಸ್ನೇಹಕೆ ಜೇನಿನ ಹನಿಯ ಪೊರೆಯಬೇಕಿದೆ ಇಂದು

ಬದುಕಿನಲಿ ಸಾಂತ್ವನವ ಕೊಡುವ ಕರುಳಿನ ಕುಡಿಯಂತೆ
ಅಲ್ಲವೇ
ಬಾಳಿನಲಿ ಸಂತಸದ ಕ್ಷಣಗಳ ಹಂಚಿ ಮೆರೆಯಬೇಕಿದೆ ಇಂದು

ಬಾಲ್ಯದ ನೆನಪುಗಳು ಮರುಕಳಿಸಿ ಜೊತೆಯಾದ ದಿನಗಳು ಮರೆತಿಲ್ಲ
ಬೆಲ್ಲದ ಸಿಹಿಯಂತೆ ಮನದ ಇಂಗಿತವನು ಬರೆಯಬೇಕಿದೆ ಇಂದು

ನೋವಿನಲಿ ಸ್ಪಂದಿಸಿ ಹೃದಯದಲಿ ಮನೆ ಮಾಡಿರುವ ಸಂಗಾತಿ
ನಲಿವಿನಲಿ ಅಮೃತವ ಕುಡಿಸುವ ಮೈತ್ರಿಯ ಕರೆಯಬೇಕಿದೆ ಇಂದು

ತುಂಟಾಟದ ಪರಮಾವಧಿ ಮುಟ್ಟಿಸಿ ಹರಿಸುವ ಹುರುಪು ಶ್ರೀಪಾದನದು
ಒಂಟಿತನ ಕಾಡುವ ಮೌನವನು ಮುರಿದು ಬೆರೆಯಬೇಕಿದೆ ಇಂದು


ಶ್ರೀಪಾದ ಆಲಗೂಡಕರ

About The Author

1 thought on “ಶ್ರೀಪಾದ ಆಲಗೂಡಕರ-ಗಜಲ್”

Leave a Reply

You cannot copy content of this page

Scroll to Top