ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ ಸಂಗಾತಿ

ಡಾ.ಸರೋಜಾ ಜಾಧವ

ಮಕ್ಕಳಲ್ಲಿ ಮೌಲ್ಯಗಳು ಮರೆಯಾಗುತ್ತಿವೆ

ಅಪರೂಪಕ್ಕೆ ಒಂದೋ ಅಥವಾ ಎರಡು ಮಕ್ಕಳು ಇರುವ ಮನೆಯಲ್ಲಿ ಕೈಗೆ ಕಾಲಿಗೆ ಧೂಳು ತಗುಲದ ಹಾಗೆ ನಾವಿಂದು ಮಕ್ಕಳನ್ನು ಬೆಳೆಸುತ್ತಿದ್ದೇವೆ.ಅವರಿಗೆ ಏನೂ ಕೊರತೆ ಆಗಬಾರದೆಂದು ಅವರಿಗೆ ಎಲ್ಲ ಸುಖ ಸಂತೋಷ ಸಿಗುವ ಹಾಗೆ ನೋಡಿಕೊಳ್ಳುತ್ತೇವೆ.ಅವರು ಬಾಯಿಬಿಟ್ಟು ಕೇಳುವ ಮೊದಲೇ ಎಲ್ಲಾ ಕೊಡಿಸುತ್ತೇವೆ.ಮಕ್ಕಳು ಹುಟ್ಟಿ ಶಾಲೆಗೆ ಹೋಗುವಾಗ ಖಾಸಗಿ ಶಾಲೆಯಲ್ಲಿ ಶಿಸ್ತಿನ ಶಿಕ್ಷಣ ಕೊಡಿಸುತ್ತೇವೆ.ಇಷ್ಟೆಲ್ಲ ಮಾಡುವ ನಾವು ಅವರಿಗೆ ಮೌಲ್ಯ ಆದರ್ಶಗಳ ಪಾಠ ಕಲಿಸುವುದೇ ಇಲ್ಲ.
ಮಕ್ಕಳಲ್ಲಿ ಹಿರಿಯರ ಕುರಿತು ಗೌರವವಿಲ್ಲ ಎಂದು ಆರೋಪಿಸುವ ನಾವು ಅವರಿಗೆ ಒಂದು ದಿನವಾದರೂ ತಂದೆ ತಾಯಿ ಬಂಧು ಬಳಗ ಗುರು ಹಿರಿಯರ ಕುರಿತು ತಿಳಿಸಿದ್ದೇವೆಯೆ? ನಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ನೋಡಿದರೆ ನಮ್ಮ ತಂದೆ ತಾಯಿಗಳು ರಾಮಾಯಣ ಮಹಾಭಾರತ ಭಾಗವತ ವಚನಗಳು ಕೀರ್ತನ ಸಾಹಿತ್ಯ ತತ್ವಜ್ಞಾನ ಕುರಿತು ನಮಗೆ ಕಲಿಸಿದ್ದು ಮರೆತು ಇಂದಿನ ಮಕ್ಕಳಿಗೆ ನಾವು ಎಂದಾದರೂ ಇವುಗಳ ಬಗ್ಗೆ ಹೇಳಿದ್ದೇವೆಯೆ? ಇಲ್ಲಿ ಮಕ್ಕಳಿಗೆ ಆರೋಪಿಸುವ ಮೊದಲು ಪಾಲಕರಾದ ನಮ್ಮ ಕರ್ತವ್ಯದ ಬಗ್ಗೆ ಆಲೋಚಿಸುವ ಅವಶ್ಯಕತೆ ಇದೆ.

ಮಕ್ಕಳಲ್ಲಿ ಮುಗ್ದತೆ ಮಾಯವಾಗುತ್ತಿದೆ.ಕಾರಣ ಮೊಬೈಲ್ ಫೋನ್.ಹಿರಿಯರಾದ ನಾವು ಪುಸ್ತಕ ಮರೆತು ಮೊಬೈಲ್ ಫೋನ್ ನಲ್ಲಿ ಸಮಯಹರಣ ಮಾಡುವುದನ್ನು ಬಿಟ್ಟು ಪುಸ್ತಕ ಓದಿದರೆ ಮಕ್ಕಳು ನಮ್ಮನ್ನು ಅನುಕರಿಸಲು ಆರಂಭಿಸುತ್ತಾರೆ.
ಸಂಜೆಯ ಸಮಯದಲ್ಲಿ ರಾಮಾಯಣ ಮಹಾಭಾರತ ಕತೆಯನ್ನು ಹೇಳುತ್ತಿ ಅವರಿಗೆ ಸಮಯ ನೀಡಿ ಗುರು ಹಿರಿಯರ ಬಗ್ಗೆ ಗೌರವ ಭಾವನೆ ಮೂಡುವಂತೆ ಮಾಡಬೇಕಿದೆ.
ಶ್ರವಣಕುಮಾರನ ಕಥೆ ಕೇಳಿ ಬೆಳೆದ ಮಕ್ಕಳು ತಂದೆ ತಾಯಿಗಳನ್ನು ವ್ರದ್ದಾ ಶ್ರಮಕ್ಕೆ  ಸೇರಿಸುವುದಿಲ್ಲ.
ನಮ್ಮ ನಾಡಿನ ಬಗ್ಗೆ ಕನ್ನಡ ನುಡಿಯ ಕುರಿತು ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ.

ಏನೇ ಆಗಲಿ ಮಕ್ಕಳಿಗೆಂದು ಮೌಲಿಕ ಶಿಕ್ಷಣದ ಅವಶ್ಯಕತೆ ತುಂಬಾ ಇದೆ.ಖನ್ನತೆಯಿಂದ ಬಳಲುವ ಮಕ್ಕಳಿಗೆ ಮನಸು ಹಗುರಾಗಿಸುವ ಸಾಹಿತ್ಯದ ಅವಶ್ಯಕತೆ ಇದೆ.

ಡಾ.ಸರೋಜಾ ಜಾಧವ

About The Author

Leave a Reply

You cannot copy content of this page

Scroll to Top