ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆದಪ್ಪ ಹೆಂಬಾ ಮಸ್ಕಿ

ಸೂಕ್ಷ್ಮ ಸುಂದರಿ

ವರುಷಗಳುರುಳಿದರೂ
ಆ ನಿನ್ನ ಕಣ್ಣೋಟ
ಸೆಳೆಯುತಿದೆ ಸೂಜಿಗಲ್ಲಿನಂದದಿ
ನಿತ್ಯ ನನ್ನನು||

ಬಟ್ಟಲು ಕಂಗಳ ಚೆಲುವೆ
ಬಳಸಿ ಮೃದು ಮುತ್ತೊಂದನಿಡಲೇ
ಆ ಕಣ್ಣಿಗೆ?
ನಾ ತಣ್ಣಗಾಗುವೆ||

ನಿನ್ನ ಹೆಜ್ಜೆಯ ಸದ್ದು
ಕಾಲ್ಗೆಜ್ಜೆ ನಾದ
ನನ್ನೆದೆಯ ಬಿಟ್ಟು
ಕೇಳಲ್ಲ ಯಾರಿಗೂ||

ಸೂಕ್ಷ್ಮ ಸುಂದರಿ
ನೀನಹುದಹುದು
ಮನದೊಳಗೆ ಬಾರೇ
ಕಾಣಲ್ಲ ಯಾರಿಗೂ||

ಎಲ್ಲದಕು ಮೌನ
ಮುಗುಳು ನಗೆಯ ಉತ್ತರ
ನಿಲುಕುತಿಲ್ಲ ನಿನ್ನ ಪ್ರೀತಿ
ಅದಿಹುದು ಆಕಾಶದೆತ್ತರ||

ನನ್ನ ಪ್ರೀತಿಯದು
ತೊಳೆದ ಸ್ವಾತಿ ಮುತ್ತು
ಅಂತ್ಯಗೊಳಿಸದಿರದನು
ಬದುಕು ಬಾಡೀತು ಅತ್ತು ಅತ್ತು||

ಕಾಡಬೇಡವೆ ಚಿನ್ನ
ತಣಿಸು ನನ್ನೆದೆಯ ತಲ್ಲಣವ
ಅರಳಿಸೆನ್ನ ಜೀವನವ
ಬಾಡಿ ಬೀಳುವ ಮುನ್ನ||


ಆದಪ್ಪ ಹೆಂಬಾ ಮಸ್ಕಿ

About The Author

Leave a Reply

You cannot copy content of this page

Scroll to Top