ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರಾಜೇಶ್ವರಿ ಎಸ್. ಹೆಗಡೆ

ನೇಸರ

ನೇಸರನು ಅಸ್ತಮಿಸುವ ಸವಿಯಾದ ಸುಸ್ಸಮಯ
ಪಾರಿಜಾತ ಹೂವು ಅರಳಿ ಪರಿಮಳ ಚೆಲ್ಲು ಸಮಯ
ಊರಿನ ದೀಪಗಳೆಲ್ಲ ಬಿರುಗಾಳಿಗೆ ನಲುಗಿ ಆರಿದೆ
ಪಡುವಣದ ದಿಕ್ಕುಗಳಿಗೆಲ್ಲ ಅಂಧಕಾರವು ಅವರಿಸಿದೆ.

ರಂಗಿನೋಕುಳಿಯನ್ನು ಬಾನಂಗಳದ ತುಂಬ ಚೆಲ್ಲುತ್ತಾ
ಬರುತಿಹನು ಬಾಲರವಿಯು ನಗುವನು ಸುರಿಸುತ್ತಾ
ನೇಸರನ ದರುಶನ ಭಾಗ್ಯವು ಕಾದಿತು ಬೆಳ್ಳಿರಥದಲ್ಲಿ
ಹೊಸತನ್ನು ತರುವನವನು ಜಗಮಗದ ಹೋಳಪಲ್ಲಿ.

ಇಣುಕಿ ನೋಡುವ ಚಕೋರ ಚಂದಿರ ಮೆಲ್ಲನೆ ಜಾರುತ
ಆಗಸದಿ ಅಡಗಿದ ಚುಕ್ಕಿಗಳು ಕೋರುತಲಿ ಸುಸ್ವಾಗತ
ಬಂಗಾರದ ಬಣ್ಣವನು ಚೆಲ್ಲುತ ನೇಸರನು ಬಾನೇರುವ
ತೆಂಗಿನಗರಿಗಳ ಮರೆಯಲಡಗಿ ಕಿರಣಗಳ ಸೂಸುವ.

ಹಸಿರು ತುಂಬಿದ ಕಾನನಕವನು ಉಸಿರನ್ನು ಪಸರಿ
ಹಕ್ಕಿಪಿಕ್ಕಿ ಖಗ ಮೃಗಗಳ ಬಾಳಿಗಾಸರೆಯನ್ನು ತೋರಿ
ಜಗಕೆಲ್ಲ ಹರವಿ ಕಾಯಕವ ಮುಗಿಸಿದ ಚೆಲುವ ನೇಸರ
ಶಶಿಯ ತಂಬೆಲರಕೆ ಮನವ ಸೋತು ನಿಂತನು ಬೇಸರ.


ರಾಜೇಶ್ವರಿ ಎಸ್. ಹೆಗಡೆ

About The Author

1 thought on “ರಾಜೇಶ್ವರಿ ಎಸ್. ಹೆಗಡೆ-ನೇಸರ”

Leave a Reply

You cannot copy content of this page

Scroll to Top