ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ-

ಗಜಲ್

ಕಡೆಗೀಲಿಲ್ಲದ ಬಂಡಿಯಂತೆ ಈ ಮನಸು ಮರುಳೆ
ಬಿರುಕು ಬಿಟ್ಟ ಗೋಡೆಯಂತೆ ಈ ಮನಸು ಮರುಳೆ

ಎಚ್ಚರ ಇರಬೇಕು ಮೈಯೆಲ್ಲ ಕಣ್ಣಾಗಿ ನೀನು
ತೂತು ಬಿದ್ದ ದೋಣಿಯಂತೆ ಈ ಮನಸು ಮರುಳೆ

ಹಸಿ ಬಿಸಿ ಬಯಕೆಗಳು ರಂಗೇರಿ ಕುಣಿದಿವೆ
ರೆಕ್ಕೆ ಬಲಿತ ಚಿಟ್ಟೆಯಂತೆ ಈ ಮನಸು ಮರುಳೆ

ಮುಗಿಲಿಗೇ ಕೈಯಿಡುವ ಚಪಲ ಏಕೆ ನಿನಗೆ
ಸೀಳಿ ಹೋದ ಕನ್ನಡಿಯಂತೆ ಈ ಮನಸು ಮರುಳೆ

ಹುಡುಕಬೇಕು ಅರಿವಿನ ಲಗಾಮು ಹೇಳಿಹಳು ಬೇಗಂ
ಕಡಿವಾಣವಿಲ್ಲದ ಕುದುರೆಯಂತೆ ಈ ಮನಸು ಮರುಳೆ


ಹಮೀದಾ ಬೇಗಂ ದೇಸಾಯಿ

About The Author

1 thought on “ಹಮೀದಾ ಬೇಗಂ ದೇಸಾಯಿ-ಗಜಲ್”

  1. ಮರುಳ ಮನಸಿನ ಬಯಕೆಗಳ ಅಧೋಗತಿಯನ್ನ ಕಂಡಂತಾಯ್ತು ಮೆಡಂ
    ಚೆಂದದ ಗಜಲ್

Leave a Reply

You cannot copy content of this page

Scroll to Top