ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಜೀವನ ಸಂತೆ

ಜೀವನ ಸಂತೆ ಮಾರ್ಕೆಟ್
ಬದುಕಲು ಭ್ರಮಣದ ಟಾರ್ಗೆಟ್

ವಾರಕ್ಕೊಮ್ಮೆ ಊರವರ ಸಂಭ್ರಮದ ತರಾತುರಿ
ತಾಜಾ ಖರೀದಿ ವಿಲೇವಾರಿಯ ತ್ವರಿತದ ದಿನಚರಿ

ಆಹಾರ ಖಾದ್ಯಗಳ ಕಚ್ಛಾಸಾಮಗ್ರಿಗಳ
ತರಕಾರಿ, ಹಣ್ಣುಗಳ, ನಿತ್ಯ ವಸ್ತುಗಳ
ಚೌಕಾಸಿಯ ಭರ್ಜರಿ ವ್ಯಾಪಾರ
ನಮ್ಮವರು ತಮ್ಮವರ
ಗುರುತು ಪರಿಚಯಗಳ
ಹಳತು ಹೊಸತುಗಳ ಮಿಶ್ರಣ ಅಪಾರ

ವ್ಯಾಪಾರದಂತೆ ಜೀವನ ಮೇಳ
ಲಾಭ ನಷ್ಟಗಳ ಬಿರುಸಿನ ಹಿಮ್ಮೇಳ

ಎಲ್ಲಿಂದಲೋ ಬಂದವರು ಸೇರಿದಂತೆ
ಸಂಬಂಧ ಸಂಸ್ಕೃತಿಯ ವಿನಿಮಯ ಜಾತ್ರೆಯಂತೆ

ಪ್ರತಿ ಸಂತೆಯು ಒಂದು ಕಲಿಕೆ
ಮರೆಯದ ನೆನಪಲಿ ನೆನೆಯುವ ಬಯಕೆ

ಜೀವನ ಅನುಭವದ ಮಹಾ ಸಂತೆ
ಹಿತ ಆಹಿತಗಳ ಮೇಲಾಟವಂತೆ
ಒದಗಿದನು ಸ್ವೀಕರಿಸಿ ಮೆದ್ದವಗೆ ಬೆಲ್ಲವಂತೆ
ಧಿಕ್ಕರಿಸಿ ಮುಗ್ಗರಿಸಿದವಗೆ ಕಹಿಬೇವಂತೆ

ಲಾಭ ಗಳಿಸಿದರೆ ಮೊಗದಲಿ ಮಂದಹಾಸ
ನಷ್ಟವಾದರೆ ಕಷ್ಟವಾದೀತು ಅಂದಿನ ಗ್ರಾಸ

ಲಾಭ ನಷ್ಟಗಳು ಸಂತೆಯಲಿ ಸಾಮಾನ್ಯ
ನಕ್ಕು ಸ್ವೀಕರಿಸಿದರೆ ಇತಿಹಾಸ ಮಾನ್ಯ


ಶಾಲಿನಿ ಕೆಮ್ಮಣ್ಣು

About The Author

1 thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಜೀವನ ಸಂತೆ”

Leave a Reply

You cannot copy content of this page

Scroll to Top