ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಶಾಂತಿ ದೂತರು.

ಯುದ್ಧ ಅಂತಿಮವಲ್ಲ-

ಕಾಲ್ಕೆರೆದು
ಮನೆ ಮುದ್ದುಕಂದಮ್ಮಗಳನ್ನು ಮುದುಕರನ್ನು
ಸಂಸಾರ ನೊಗ ಹೊತ್ತ
ರಮಣಿಯರನ್ನು
ಎಳೆದೆಳೆದು ತಂದು
ತಮ್ಮ ಪಟ್ಟಿಯ ಜಾಗದಲ್ಲಡಗಿಸಿ ಹಿಂಸಿಸಿ
ಇರಿದಿರಿದು ಕೊಂದರೂ

ಯುದ್ಧ
ಬೇಡವೆಂದವರು ನೀವಲ್ಲವೆ
ಬುದ್ಧಿವಂತ ಜೀವಿಗಳೇ!

ಸುಖದ ಜೀವಿಗಳೆ
ಉಸಿರುಸಿರಿಗೂ ತಾಪತ್ರಯ
ಪ್ರತಿ ಕ್ಷಣಕೂ ಪ್ರಳಯ ಅನುಭವಿಸುವ
ಮನುಜರ ನರಕ
ನಿಮಗೆಷ್ಟು ಗೊತ್ತು ?

ಯುದ್ಧ ಅಂತಿಮವಲ್ಲ
ಎಂದು ಅವರಿಗೂ ಗೊತ್ತು
ಯುದ್ಧ ಚಿರಸ್ಥಾಯಿಯಲ್ಲ
ಎಂದು ಇವರಿಗೂ ಗೊತ್ತು

ಸಕಲರಿಗೂ ಸಮಬಾಳು
ಸಕಲರಿಗೂ ಸಮಪಾಲು ಎಂದು
ಸಕಲವಲ್ಲಭರಿಗೂ ಗೊತ್ತು

ಆದರೆ
ಬೆಕ್ಕಿಗೆ ಗಂಟೆ ಕಟ್ಟುವರಾರು??
“ಒಲ್ಲದ ಗಂಡ ಮೊಸರಲ್ಲಿ ಕಲ್ಲು
ಹುಡುಕುತ್ತಿರುವಾಗ “??


ಡಾ ಡೋ.ನಾ.ವೆಂಕಟೇಶ

About The Author

4 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಶಾಂತಿ ದೂತರು.”

  1. ಮರುಪೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು .ಸಮಯವು ಸೂಕ್ತವಾಗಿದೆ.

Leave a Reply

You cannot copy content of this page

Scroll to Top