ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಉತ್ತಮ ಎ.ದೊಡ್ಮನಿ ಕವಿತೆ

ಯುದ್ದ ಅಂತಿಮವಲ್ಲ

ಧರ್ಮಗಳ ಕಿತ್ತಾಟದಲ್ಲಿ
ಮನುಷ್ಯತ್ವವನ್ನು ಹಾರಾಜಿಗಿಟ್ಟಿದಾರೆ
ರಕ್ತದೋಕುಳಿ ಆಡಲು

ಊರೆಲ್ಲಾ ಸ್ಮಶಾನವಾಗೀ
ಕಿತ್ತು ತಿನ್ನುವ ಧರ್ಮದ ದಲ್ಲಾಳಿಗಳು
ರಣಾ ಹದ್ದುಗಳಂತೆ ಹೊಂಚು ಹಾಕಿ

ಜಾತಿ-ಧರ್ಮದ ಅಮಲು ತುಂಬಿಕೊಂಡು
ಮೆರೆವಣಿಗೆ ಹೊರಟಿದ್ದಾರೆ
ಮೃಗಿಗಳ ವರ್ತನೆ, ನಡು ಬೀದಿಗಳಲ್ಲಿ

ಸುಡುವ ಬೆಂಕಿಗೆ ಗೊತ್ತು
ಅದರ ಗುಣ, ಸುಡುವದಷ್ಟೆ
ತನ್ನವರ ಹಿಡಿದೆ, ಬಿಡದು

ರಸ್ತೆಯಲೇಲ್ಲಾ ಚೆಲ್ಲಾಪಿಲ್ಲಿ ಆದ ರಕ್ತ
ಗುರ್ತು ಸಿಗದೆ ಹುಡುಕಬೇಕಿದೆ
ಯಾವ ಧರ್ಮದೆಂದು, ಮುಂಬತ್ತಿ ಸಾಂತ್ವಾನ

ಕಾಲಿಗಂಟಿದ ರಕ್ತದ ಕಲೆಗಳು ಯಾವುದೆಂದು
ಬಂದೂಕಿನ ನಳಿಕೆಗೆ ಮಾಮೂಲಿಯಾಗಿದೆ
ಹುಡುಕುತ್ತಿದೆ ಮುಂದಿನ ಸರದಿಗಾಗಿ,

ಇಲ್ಲಿ ಕಾಯಬೇಕಿಲ್ಲ ನಿನ್ನ ಸರದಿಗಾಗಿ
ಮದ್ದು-ಗುಂಡಿಗೆಲ್ಲ, ತಾರತಮ್ಯವಿಲ್ಲ
ಅದರ ಕಾಯಕ ಮರ್ತಿಲ್ಲ

ಹಾದಿ ಬೀದಿಯಲ್ಲಿ ಹೆಣಗಳ ರಾಶಿ
ರುಂಡ, ಮುಂಡಾ, ಕೈ, ಕಾಲು ಅದಲು-ಬದಲು
ಯಾವುದೂ, ಯಾರದೆಂದು ತಿಳಿಯದಾಗಿದೆ

ಯುದ್ದ ಅಂದರೇ ಹಾಗೇನೆ
ಎಲ್ಲವೂ,ಎಲ್ಲರನ್ನೂ ಕಳೆದುಕೊಂಡ ಮೇಲೆ
ನೆಲ, ಯಾರಿಗಾಗಿ-ಯಾತಕ್ಕಾಗಿ


ಉತ್ತಮ ಎ.ದೊಡ್ಮನಿ

About The Author

1 thought on “ಉತ್ತಮ ಎ.ದೊಡ್ಮನಿ ಕವಿತೆ-ಯುದ್ದ ಅಂತಿಮವಲ್ಲ”

  1. ಯುದ್ಧ ಅಂತಿಮವಲ್ಲ..
    ತುಂಬಾ ಚಿಂತಾನರ್ಹ ಕವಿತೆ…
    ಆದರೆ…..,
    ಕಟುಕನಿಗೆ ಕವಿತೆ ನಾಟಿತೆ?!

Leave a Reply

You cannot copy content of this page

Scroll to Top