ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಚಂದ್ರನೇಕೆ? ಆಕರ್ಷಕ!

ಅವಳ ಪ್ರೇಮ ಪಾಶದಲಿ
ಮೈ ಯುಡುಗಿ ನಕ್ಕು ಬಿಟ್ಟ
ಚಂದಿರ ವಸುಧೆಯೊಳಡಗಿದ
ಅಮೃತದ ಸವಿಯನ್ನೆಲ್ಲ
ಆಪೋಷಣ ಗಯ್ಯಲು
ನಕ್ಕ ಬಿಟ್ಟ ನಲ್ಲವೇ ಅಕ್ಕ ಚಂದಿರ
ಸಿರಿಮುಡಿಗೆಯ ಅನಂತ ಲೀಲಾಪಾಶದಲಿ
ಬಂಧಿಯಾಗಿರಲು
ತನ್ನನೆಯ ತಂಪು ಚದುರಿ
ಬಾಹಂಗಮ ವಿರಹ ನೋಟದಲ್ಲಿ
ನಕ್ಕ ಬಿಟ್ಟ ನಲ್ಲವೇ ?ಚಂದಿರ
ಅನಂತ ಚದುರ ಮೈಲಿ ದೂರ
ನೋಡಲು ಆಕರ್ಷಕ
ಮುದ್ದು ಮಕ್ಕಳ ಕಿಲ ಕಿಲ
ನಗುವಿಗೆ ಇವನೇ ಅಲ್ಲವೇನೆ? ಅಕ್ಕ
ವಿಜ್ಞಾನಿಗಳ ಸಂಶೋಧನೆಗೆ
ಕಲ್ಲು ಗುಂಡು ಕವಿಮನಗಳಿಗೆ
ರಸಕಾವ್ಯ
ಹೆಂಗಳೆಯರ ಮಧುರ
ಮುಖ ಕಮಲಕ್ಕೆ ಉಪಮಾಲೋಲ ಅಲಂಕಾರತನಯ ವೈಭವಪೇತ ಇವನೇ ಅಲ್ಲವೇನೆ ? ಅಕ್ಕ
ಮುಂಗುರುಳು ಮಂದಾರ
ಎನಿಸಲಾರದ ತಾರಾಗಣ
ಅನಂತ ಬಯಲ
ಪ್ರದೇಶೊಳಗೆ ಏಕಾಂಕಿ
ಸತ್ಯಾನ್ವೇಷಣೆಯ ರಾಕೇಟ್ ಯಾತ್ರೆ
ಒಮ್ಮೆ ಅನಂತ ಬಯಲ ನಾಡಿನಲ್ಲಿ
ಕಾಣುವ ಚಂದಿರ ಕಣ್ಣಿಗೆ ಹತ್ತಿರ
ನಾ ನಡೆವ ದಾರಿಗೆಲ್ಲ ಹಿಂಬಾಲಕ
ಓಡುವನು ನಾ ಓಡಿದಾಗ
ನಗುವನು ಓಟ ನಿಂತಾಗ
ಹಳಿದು ಶಾಪ ಹಾಕಿದವರೇಷ್ಷೋ ?
ಕಾ ಕಾಣೆ ಇಂದುಧರನ
ನಿತ್ಯ ಕಾಯಕ
ಇರುಳಿಗೆ ಅಲಂಕೃತ
ಓಡಿಸುವನು ಮನದ ಕತ್ತಲೆಯನು
ನಿದಿರೆ ಬಾರದ ಇರುಳ
ಹೊತ್ತಿಗೆಯಲಿ ಇವನದೇ
ವರ್ಣನೆ ಅಲ್ಲವೇನ ?ಅಕ್ಕ
ಏಕೇ? ನಕ್ಕ ಅಕ್ಕ ಚಂದಿರ
ಮಾಮರದ ಕೋಗಿಲೆಯ ವಸಂತ
ನೇಸರನ ಕಣ್ಣ ಹೊಳಪು
ನೈದಿಲೆಯ ಬಣ್ಣ ಬೆಡಗು
ರಂಗೇರಿದ ಬಣ್ಣದ ತೇರು ಏರಿ
ಏಕೆ ? ನಕ್ಕ ಅಕ್ಕ ಚಂದಿರ …


ಡಾ ಸಾವಿತ್ರಿ ಕಮಲಾಪೂರ

About The Author

Leave a Reply

You cannot copy content of this page

Scroll to Top