ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ರಾಹುಲ ಮರಳಿ

ಊಟವ ಮಾಡಿಸುತ ಕಥೆಯೊಂದಿಗೆ ಚಂದಾ ಮಾಮನ ತೋರಿಸಿದವರು
ಜಗತ್ತಿಗೇ ಚಂದಿರಿನ ಮೇಲೆ ತ್ರಿವರ್ಣವನಿಟ್ಟು ಭಾರತದ ಕೀರ್ತಿ ತಿಳಿಸಿದವರು

ಮುಖಕ್ಕೆ ಫೇಸ್ಪ್ಯಾಕ್ ಹಾಕಿ ಬ್ಯೂಟಿ ಪಾರ್ಲರ್ ಹೋದವರೆಲ್ಲ ಸಾಧಕರಲ್ಲ
ಇಸ್ರೋವಿನ ಸಾಧನೆಯ ಗರಿಮೆಯನ್ನು ಹೆಚ್ಚಿಸಲು ಬಿಡದೇ ಶ್ರಮಿಸಿದವರು

ಹೆಣ್ಣು ನಾಲ್ಕು ಗೋಡೆಯ ಅಡುಗೆ ಮನೆಗೆ ಸೀಮಿತವೆನ್ನುವುದು ಗತಕಾಲ
ದ್ವಿಚಕ್ರದಿಂದ ಬಾಹ್ಯಾಕಾಶ ವರೆಗೂ ಉತ್ತಮ ಜವಾಬ್ದಾರಿ ನಿಭಾಯಿಸಿದವರು

ಮೈತುಂಬ ಸೀರೆಯನುಟ್ಟ ಮಲ್ಲಿಗೆ ಮುಡಿದ ಮಾತೆಯರೆ ಕೈ ಮುಗಿವೆ
ಮರಳಿ ಯತ್ನವ ಮಾಡಿ ಚಂದ್ರಯಾನವನ್ನು ಯಶಸ್ವಿಯಾಗಿ ಸಾಧಿಸಿದವರು

ಹೆಣ್ಣು ಕೋಮಲೆ ನೈದಿಲೆ ಮಾತ್ರವಲ್ಲ ಅವಳೊಬ್ಬ ಸ್ಪೂರ್ತಿಯ ಸೆಲೆ ಜೀವಕವಿ
ಪ್ರತಿ ಭಾರತ ವಿಜ್ಞಾನಿ ಮಹಿಳೆ ದೇಶದ ಸಂಸ್ಕೃತಿಯ ಉಳಿವಿಗೆ ಕಾರಣವೆನಿಸಿದವರು


ರಾಹುಲ ಮರಳಿ

About The Author

1 thought on “ರಾಹುಲ ಮರಳಿ ಗಜಲ್”

Leave a Reply

You cannot copy content of this page

Scroll to Top