ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಗಜಲ್

ರಂಗಿನ ಮರಕುಟ್ಟಿಗದ ಹಕ್ಕಿಯ
ಮಾಧುರ್ಯ ನೋಡಿದೆ ಗೆಳತಿ/
ಚಂದದಿ ಅಂದದಗುಡ್ಡದ ಮೇಲೆಯೇ
ಕುಳಿತು ಹಾಡಿದೆ ಗೆಳತಿ//

ಅದರ ಪರಿಶ್ರಮಮುಂದೆ ನಮ್ಮಯ
ಶ್ರಮವು ಸಾಟಿಯಾಗುವುದೇ/
ಅಂಬರ ಪ್ರಕಾಶಮಾನದಿ ಬೆಳಗಿ ಪ್ರಕೃತಿ ಕಾಡಿದೆ ಗೆಳತಿ//

ಗವಿದ ಕತ್ತಲೆಯೊಳಗೆ ಬಿಳುಪು ಒಂದಾಗಿ ಪ್ರಜ್ವಲಿಸುವುದೇ/
ಭುವನ ಅಂದಗಾತಿಯಂತೆ ಸೆಳೆದು
ಗೆಲವು ಮಾಡಿದೆ ಗೆಳತಿ//

ಚೂಪದ ಉದ್ದಕೊಕ್ಕಿನಲಿ ವೃಕ್ಷವ
ಕುಕ್ಕುತ ಗೂಡಕಟ್ಟುವುದೇ/
ಮಮತೆ ಬದ್ಧತೆಯೊಂದಿಗೆ ಮರಿಯ
ರಕ್ಷಣೆ ಬೇಡಿದೆ ಗೆಳತಿ//

ಕಟ್ಟೆಯ ನಿಷ್ಕಲ್ಮಶವಾದ ಅರ್ತಿಗೆ
ನಂಜನು ನೀ ಇಟ್ಟುಹೋದೆಯಾ/
ಕಪಟ ಜಾಲದೊಳಗೆನೇ ಸಿಲುಕಿ
ಶೋಕವ ಪಾಡಿದೆ ಗೆಳತಿ//


About The Author

3 thoughts on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ-ಗಜಲ್”

  1. ಸರೋಜಾ.ಜೈಶಂಕರ್.

    ತುಂಬಾ ಚೆನ್ನಾಗಿದೆ ಸರ್. ಅಭಿನಂದನೆಗಳು

Leave a Reply

You cannot copy content of this page

Scroll to Top