ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಸಂತ್. ಕೆ. ಹೆಚ್

ಮನವೆಂಬ ಮರ್ಕಟ

ಯೌವ್ವನದ ತುದಿಯಲಿ
ಕಾಮದ ಮದವೇರಿ
ಕಾಯದಲಿ ಕುಣಿಯುತ್ತಿತ್ತು
ಮನವೆಂಬ ಮರ್ಕಟ ||
ಕಂಡ ಕಂಡದ್ದನ್ನೆಲ್ಲಾ
ಭೋಗಿಸಿ ಬಿಡುವಾಸೆ
ತದೇಕಚಿತ್ತದಲಿ
ವಿವೇಕರಹಿತವಾಗಿ ಅಲೆದಾಡುತ್ತಿದೆ
ಮನವೆಂಬ ಮರ್ಕಟ ||
ಆವ ಪರಿವಿಲ್ಲದೆ
ಹರೆಯದ ದಿನವೆಲ್ಲಾ
ಕಾಮ-ಕ್ರೋಧದಲಿ ಮಿಂದೆದ್ದಿದೆ
ಮನವೆಂಬ ಮರ್ಕಟ ||
ನಸುಗೋಪ ತುಸು
ಹೆಚ್ಚಾಗಿದೆ ,ಮನದ
ಮೂಲೆ-ಮೂಲೆಯಲ್ಲಿ
ಆರ ಭಯವಿಲ್ಲದೆ
ಏರಿ ಹಾರಿ ಬಿದ್ದಿದೆ
ಮನವೆಂಬ ಮರ್ಕಟ ||


ವಸಂತ್. ಕೆ. ಹೆಚ್.

About The Author

2 thoughts on “ವಸಂತ್. ಕೆ. ಹೆಚ್ ಕವಿತೆ-ಮನವೆಂಬ ಮರ್ಕಟ”

Leave a Reply

You cannot copy content of this page

Scroll to Top