ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ

ಗಜಲ್

ದಣಿವಿರದೆ ಬದುಕಿನ ಜಟಕಾ ಬಂಡಿ ತುಳಿದವನು ನಮ್ಮಪ್ಪ
ಸಂಸಾರ-ಸಾರಥಿ ಸಹನಾಮೂರ್ತಿಯಂತೆ ಜೀವಿಸಿದವನು ನಮ್ಮಪ್ಪ//

ದುಗುಡ-ದುಮ್ಮಾನಕ್ಕೆಲ್ಲ ಕಿರುನಗೆ ಬೀರಿದವನು ನಮ್ಮಪ್ಪ
ಮನೆಗೆಲ್ಲ ಗೆಲುವಿನ ಮಾಲೆಯ ಹೆಣೆದವನು ನಮ್ಮಪ್ಪ//

ಕಾಯಕಯೋಗಿ ಚೈತನ್ಯದ ಚಿಲುಮೆಯಿವನು ನಮ್ಮಪ್ಪ/
ಕಷ್ಟಗಳಿಗೆಲ್ಲ ಕೈಕೊಳ ಹಾಕಿ ಬಂಧಿಸಿದವನು ನಮ್ಮಪ್ಪ//

ಅನುಭವ ಶಾಲೆಯ ಗುರುವಿನಂತೆ ನಡೆದವನು ನಮ್ಮಪ್ಪ/
ಬೆವರ ಹನಿಯಲಿ ನಮ್ಮ ನೋವ ಮರೆಸಿದವನು ನಮ್ಮಪ್ಪ//

ದುಡಿಮೆಯನ್ನೆ ತಾಯಿ ತಂದೆಯಾಗಿ ನಂಬಿದವನು ನಮ್ಮಪ್ಪ/
ಕಾಯ ಕರಗಿಸುತ ಕೌಶಲದಲಿಯೆ ಮರೆಯಾದವನು ನಮ್ಮಪ್ಪ//


About The Author

Leave a Reply

You cannot copy content of this page

Scroll to Top