ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಮಾಮ್ ಮದ್ಗಾರ-ನನ್ನಪ್ಪ

ವರ್ತಮಾನದ
ನರ್ತನ ವನ್ನು
ನಿಶ್ಯಭ್ದ ಗೊಳಿಸಿದ್ದರು
ನನ್ನಪ್ಪ ( ನನ್ನ ಪಾಲಿಗೆ)

ಭವ್ಯ ಭವಿಷ್ಯದ
ದಿವ್ಯದ ದಾರಿ
ಯಾಗಿದ್ದರು ನನ್ನಪ್ಪ

ಬಡತನದ
ಬೇತಾಳ ದರಿದ್ರದ
ಬೆನ್ನೇರಿದ್ದರೂ
ಬದುಕಿನ ಗಾಳಿಪಟ
ಬಡತನದ ಗಾಳಿಗೆ
ತುಂಡಾಗದಂತೆ
ಬದುಕಿದರು
ನನ್ನಪ್ಪ

ಅಂಬೆಗಾಲಿನ
ಅಂಬಾರಿಯಲಿ
ದಸರಾ ಮೆರವಣಿಗೆ
ಮಾಡಿಸಿ ದವರು
ನನ್ನಪ್ಪ

ಶ್ರಮದ ಬೆಲೆಯೇ ಸಾಕು
ಬಡಿದೋಡಿಸಲು
ಬಡತನವ..
ಜೋತು ಬಿದ್ದು ಬಿಡು
ಭರವಸೆಯ ಭುಜಕೆ
ಎಂದು ಕಲಿಸಿದವರು
ನನ್ನಪ್ಪ

ಕದಲದ ಕಲ್ಲಾಗು
ದುಷ್ಕರ್ಮಗಳಿಗೆ
ಕರ್ಮದ ಧರ್ಮ
ನಿನ್ನ ಹಿಂದೆ
ತುಳಿದು ಬದುಕು
ಅಹಂಕಾರವ..
ಎಂದು ತಿಳಿಸಿದವರು
ನನ್ನಪ್ಪ

ಎರಡು ದಶಕಗಳ
ಹಿಂದೆ..
ಕಾಲಜೇಡನ
ಶಯ್ಯೆಯಲಿ
ಬಾಳ ಯುದ್ದವ
ಮುಗಿಸಿ ಮಲಗಿದರು
ನನ್ಬಪ್ಪ ಸಾವ
ಸುಖವನಪ್ಪಿ.‌

ಬೆಳಕಾಗಿಹದಿಂದು
ನಿಮ್ಮ ದಾರಿ
ಚಣ ಚಣವೂ ನನ್ನ
ಬೆನ್ನ ಹಿಂದಿದೆ
ನಿಮ್ಮೊಲವು

ಪ್ರತಿಕ್ಷಣವೂ..
ಕಾಣುತಿದೆ
ನಿಮ್ಮ ಮೊಗವು…


About The Author

Leave a Reply

You cannot copy content of this page

Scroll to Top