ಯೋಗಿ ಸಿದ್ಧರಾಮ-ವಿಶೇಷ ಲೇಖನ
ಯೋಗಿ ಸಿದ್ಧರಾಮ ಡಾ.ದಾನಮ್ಮ ಝಳಕಿ ಹಾದಿ ಹಾದಿಗೆ ಗುಡಿಯ ಬೀದಿ ಬೀದಿಗೆ ಕೆರೆಯಸಾಧಿಸಿದ ಕಟ್ಟಿ ಸಿದ್ಧರಾಮ – ಸೊನ್ನಲಿಗೆಸಾಧುಸಿದ್ಧನಿಗೆ ಮನೆಯಾಯ್ತು || ದಾರಿದಾರಿಗಳಲೆಲ್ಲ ಗುಡಿಗಳು ; ಬೀದಿ ಬೀದಿಗಳಲ್ಲಿ ಕೆರೆಗಳು ಮುಂತಾದುವನ್ನು ಕಟ್ಟಿಸುತ್ತ ಸಿದ್ಧರಾಮೇಶ್ವರರು ಸೊನ್ನಲಿಗೆಯಲ್ಲಿ (ಇಂದಿನ ಮಹಾರಾಷ್ಟ್ರದ ಸೋಲಾಪುರ) ನೆಲೆಸಿದ್ದರು ಎಂದು ಜನಪದರು ಕೊಂಡಾಡಿದ್ದಾರೆ. ಸಿದ್ಧರಾಮರು ಬಹುದೊಡ್ಡ ಶರಣ, ಸಮತೆಯ ಸ್ವರೂಪ, ಯೋಗಿ ಮತ್ತು ಅನುಭಾವಿಗಳು. ಸಿದ್ಧರಾಮರು ಕಲ್ಯಾಣಕ್ಕೆ ತಡವಾಗಿ ಬಂದರೂ ವೈವಿಧ್ಯಮಯವಾದ ವಚನಗಳನ್ನು ರಚಿಸಿ, ಅತ್ಯಂತ ಗಟ್ಟಿಯಾಗಿ ಶರಣ ಚಳುವಳಿಗೆ ಹಾಗೂ ವಚನ ಸಾಹಿತ್ಯದ ಉಳುವಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರು.ಭಕ್ತನಾದಡೆ ಬಸವಣ್ಣನಂತಾಗಬೇಕು,ಜಂಗಮವಾದಡೆ ಪ್ರಭುವಿನಂತಾಗಬೇಕು.ಭೋಗಿಯಾದಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು.ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ,ಎಂದು ತನ್ನನ್ನು ತಾನು ಹೇಳಿಕೊಂಡಿರುವದರಿಂದ ಶ್ರೀಗುರು ಸಿದ್ಧರಾಮೇಶ್ವರರು ಸ್ವಯಂ ಶಂಭು, ಯೋಗಿಗಳ ಯೋಗಿ ಮಹಾಶಿವಯೋಗಿಗಳು. ಈ ಸ್ವಯಂ ಶಂಭು ಅವರ ವಿಚಾರ ಸುಮಾರು 40 ಶಾಸನಗಳಲ್ಲಿ ಬಂದಿವೆ. ಶ್ರೀಗುರು ಸಿದ್ಧರಾಮೇಶ್ವರರ ಕುರಿತು ಮಹಾಕವಿ ರಾಘವಾಂಕರು “ ಶ್ರೀ ಸಿದ್ಧರಾಮ ಚಾರಿತ್ರ” ಗ್ರಂಥವನ್ನು ರಚಿಸಿದ್ದಾರೆ.ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಯೋಗಿ ಸಿದ್ಧರಾಮರು ಒಬ್ಬರಾಗಿದ್ದಾರೆ. ಇವರ ಜೀವನ ಜರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ, ಶಾಸನ, ಐತಿಹ್ಯಗಳಲ್ಲಿ ದೊರಿಯುತ್ತವೆ. ಸೊನ್ನಲಿಗೆ (ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಇವರ ಜನ್ಮಸ್ಥಳ. ಇವರ ತಂದೆ ಸೊನ್ನಲಿಗೆಯ ಮೊರಡಿಯ ಮುದ್ದಯ್ಯ (ಮುದ್ದುಗೌಡ), ತಾಯಿ ಸುಗ್ಗವ್ವೆ. ಇವರು ಕುಡು ಒಕ್ಕಲಿಗರ ಕುಟುಂಬದಲ್ಲಿ ಜನಿಸಿದರು. ಇವರು ತಾಯಿಯ ಗರ್ಭದಲ್ಲಿದ್ದಾಗಲೇ ಹಾಲು ಮತಸ್ಥ ಕುರುಬ ಸಮಾಜಕ್ಕೆ ಸೇರಿದ ರೇವಣಸಿದ್ಧರು ಸುಗ್ಗಲಾದೇವಿಗೆ ಆಶೀರ್ವಾದ ಮಾಡಿ ನಿನ್ನ ಹೊಟ್ಟೆಯಲ್ಲಿ ಶಿವಯೋಗಿ ಹುಟ್ಟಿ ಬರುತ್ತಾನೆಂದು ಆಶೀರ್ವದಿಸಿದರಂತೆ. ಹೀಗೆ ರೇವಣಸಿದ್ಧರ ವರದಿಂದ ಹುಟ್ಟಿದರು ಎಂಬ ಐತಿಹ್ಯವಿದೆ. ಇವರ ಮನೆದೈವ-ಧೂಳಿಮಾಕಾಳ. ಆದ್ದರಿಂದ ಇವರಿಗೆ ತಂದೆ ತಾಯಿ ಧೂಳಿಮಾಕಾಳ ಎಂದು ಹೆಸರಿಟ್ಟರು. ಇದು ಇವರ ಪೂರ್ವಾಶ್ರಮದ ಹೆಸರು. ಅನಂತರ ನಾಥಸಿದ್ಧ ಸಂಪ್ರದಾಯದವನಾಗುವಲ್ಲಿ ಸಿದ್ಧರಾಮನೆಂದು ಪ್ರಸಿದ್ಧರಾದರು. ಬಾಲ್ಯದಲ್ಲಿ ಇವರು ಮುಗ್ಧಭಕ್ತ. ದನಕಾಯುವ ಕಾಯಕದಲ್ಲಿ ತೊಡಗಿದ್ದರು.ಸಿದ್ಧರಾಮ ವಚನ, ಸ್ವರವಚನ, ಬಸವಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾರೆ.. ವಚನ ಮತ್ತು ಸ್ವರವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ ‘ಯೋಗಿನಾಥ’ ಅಂಕಿತವಿದೆ. ಅಪಾರ ಗೌರವ ಪ್ರೀತಿ ಆದರದ ಭಾವನೆಗಳಿಂದ ಬಸವಣ್ಣನವರ ಬಗ್ಗೆ ಸಿದ್ಧರಾಮರು ಬರೆದಷ್ಟು ಇನ್ನೊಬ್ಬ ಶರಣರು ಬರೆದದ್ದನ್ನು ಕಾಣಲಾರೆವು. ಇದು ಸ್ತುತಿಯಲ್ಲ, ಸಾಮಾಜಿಕ ಚಳುವಳಿಯಲ್ಲಿನ ಋಣಭಾರವನ್ನು ಕಡಿಮೆ ಮಾಡಿಕೊಳ್ಳುವ ಪರಿಹಾರವಷ್ಟೇ ಎನ್ನುತ್ತಾರೆ ಸಿದ್ಧರಾಮರುಸಿದ್ಧರಾಮರ ಜೀವನದಲ್ಲಿ ಎರಡು ಪ್ರಮುಖ ಘಟ್ಟಗಳಿವೆ.1 ) ಕಲ್ಯಾಣಕ್ಕೆ ಬರುವ ಮುನ್ನ ಸೊನ್ನಲಾಪುರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು.2 ) ಅಲ್ಲಮರು ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆ ತಂದ ನಂತರ ಶರಣರ ಜೊತೆ ಬೆರೆತು ಆಧ್ಯಾತ್ಮಿಕ ಯೋಗ ಸಾಧನೆಗೆ ಮುಂದಾಗಿರುವುದು. ಒಂದು ದಿನ ಬಾಲಕ ಸಿದ್ಧರಾಮರು ನವಣೆ ಬಿತ್ತಿದ ಹೊಲದಲ್ಲಿ ನಿಂತಿದ್ದಾಗ, ಮಲ್ಲಯ್ಯ ನವರ ದರ್ಶನವಾಗಿ ಅಂಬಲಿ ಮಜ್ಜಿಗೆ ತರಲು ಕೇಳಿದರಂತೆ, ಅದನ್ನು ತರಲು ಹೋರಟ ಸಿದ್ಧರಾಮರು ಮಲ್ಲಯ್ಯನವರಿಗೆ ನೀವು ಎಲ್ಲಿಗೆ ಹೋಗುತ್ತಿರುವಿರಿ ಎಂದು ಕೇಳಿದರಂತೆ ಅದಕ್ಕೆ ಮಲ್ಲಯ್ಯನವರು ಶ್ರೀಶೈಲಕ್ಕೆ ಎಂದು ಉತ್ತರಿಸಿದರು.ತಾವು ಅಂಬಲಿ ಮಜ್ಜಿಗೆ ತರುವವರೆಗೆ ತಾವು ಇಲ್ಲಿಯೇ ಇರಬೇಕೆಂದು ಹೇಳಿ, ಮನೆಗೆ ಓಡೋಡಿ ಹೋಗಿ ತೆಗೆದುಕೊಂಡು ಬರುವಷ್ಟರಲ್ಲಿ ಅಲ್ಲಿ ಮಲ್ಲಯ್ಯ ಇರಲಿಲ್ಲವಂತೆ, ಕೊನೆಗೆ ಶ್ರೀಶೈಲಕ್ಕೆ ಹೊರಟಿದ್ದ ಪಾದಯಾತ್ರಿಕರೊಂದಿಗೆ ಮಲ್ಲಯ್ಯನ ದರ್ಶನ ಮಾಡಲು ಶ್ರೀಶೈಲಕ್ಕೆ ಹೋದರು. ಹಾಗೂ ಹುಡುಕುತ್ತಾ ತನಗಿದು ಸತ್ವ ಪರೀಕ್ಷೆ ಎಂದು ಬೆಟ್ಟದ ಆಳದಿಂದ ಕಣ್ಮಿಚ್ಚಿ ಕಮರಿಯೊಳಗೆ ಹಾರಿಬಿಟ್ಟರು. ಸಿದ್ಧರಾಮ ಎದ್ದಾಗ ತಾನಿರುವುದು ಮಲ್ಲಯ್ಯನ ತೊಡೆಯ ಮೇಲೆ ಎಂದು ಗೊತ್ತಾಯಿತು. ಆಗ ಮಲ್ಲಯ್ಯ ಇವರಿಗೆ ನಿನ್ನಿಂದ ಲೋಕೋಪಕಾರವಾಗಬೇಕಾಗಿದೆ. ದುಖಿಃತರ ದುಃಖ ನಿವಾರಣೆಯಾಗಬೇಕಾಗಿದೆ, ನೀನು ಸೋನ್ನಲಾಪುರಕ್ಕೆ ಹೋಗಿ ಅದನ್ನೇ ಅಭಿನವ ಶ್ರೀಶೈಲವನ್ನಾಗಿ ಮಾಡು ಎಂದು ತಿಳಿಸಿದರಂತೆ. ಹೀಗೆ ಸೊನ್ನಲಾಪುರಕ್ಕೆ ಬಂದು ಲೋಕೋಪಯೋಗಿ ಕಾರ್ಯದಲ್ಲಿ ತೊಡಗಿಸಿಕೊಂಡರು ಎಂಬ ಪೌರಾಣಿಕ ಕಥೆಯೊಂದು ಇದೆ. ಅದೇನೇ ಇರಲಿ ಸಿದ್ಧರಾಮರು ಜನಕ್ಕೆ ಹಿತವಾಗುವ ಕೆರೆ, ಗುಡಿ ಗುಂಡಾರ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದರು. ಎಂಬುದಂತೂ ನಿಜ.ಸೊನ್ನಲಿಗೆಗೆ ಬಂದು ದೇವಾಲಯ ಸ್ಥಾಪಿಸಿ, ಆ ಆವರಣಕ್ಕೆ ‘ಯೋಗ ರಮಣೀಯ ಕ್ಷೇತ್ರ’ ವೆಂದು ಹೆಸರಿಸಿದ. ಸಿದ್ಧರಾಮರು ಮುಂದೆ ನೊಳಂಬ ರಾಣಿ ಚಾಮಲಾದೇವಿಯ ಸೊಲ್ಲಾಪೂರದ ಅರಸೊತ್ತಿಗೆಯಲ್ಲಿ ರಾಜಗುರುಗಳಾಗಿ ಕೆರೆ ಕಟ್ಟೆ ಕಾಲುವೆ ಗುಡಿ ನಿರ್ಮಾಣ ಮಾಡುತ್ತಾ ಜನಸೇವೆಗೆ ಇಳಿದರು. ಶರೀರವನ್ನು ವ್ಯರ್ಥವಾಗಿ ಕಳೆಯಬಾರದೆಂಬುದು ಅವರ ಪ್ರಜ್ಞೆಯಾಗಿತ್ತು.ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದರು. ಈ ಎಲ್ಲ ಕಾರ್ಯಕ್ಕೆ ಹಾವಿನಾಳ ಕಲ್ಲಯ್ಯನವರು ಇವರಿಗೆ ಜೊತೆಯಾಗಿದ್ದರು. ಸಿದ್ಧರಾಮನ ಬಿಮ್ಮು ಬಿದ್ದು ಹೋಯಿತು ಕರಗಿಬುದ್ದ ಪ್ರಭುದೇವ ತಿಳಿ ಹೇಳಿ | ಸೊನ್ನಲಗಿಸಿದ್ಧ ಶರಣಾದ ಶಿವ ಮತಕೆ || (ಕ, ಬ, ೩೨)ಎಂಬ ಜನಪದ ಹಾಡು ಅಲ್ಲಮ ಪ್ರಭುವಿನ ಜೊತೆ ಸಂವಾದ ಮಾಡುತ್ತಾ ಹೋದಂತೆ ಸಿದ್ದರಾಮೇಶನ ಅಹಂ ಇಳಿಯುತ್ತ ಹೋಯಿತು ಎಂಬುದು ತಿಳಿಯುವದು. ಎಲ್ಲಿ ನಿಮ್ಮ ಕೆರೆ ಕಟ್ಟುವ ಒಡ್ಡರನು ಎಂಬ ಅಲ್ಲಮನ ನುಡಿಗೆ ಸಿದ್ಧರಾಮ ಸಿಡಿದೆದ್ದು ಕ್ರೋದಾಗ್ನಿಯಲ್ಲಿ ಮುಳುಗಿಸುವಂತೆ ಮಾಡಿತು. ಅಲ್ಲಿ ಅಲ್ಲಮ ಸಿದ್ಧರಾಮರ ಸಂವಾದ ಪ್ರಾರಂಭವಾಯಿತು. ಸಿದ್ಧರಾಮರು ತಾವು ಅದುವರೆಗೆ ಮಾಡಿದ ಜನಹಿತ ಕಾರ್ಯಗಳೆಲ್ಲ ನಿರರ್ಥಕವೇ? ಎಂದು ಅಲ್ಲಮರಿಗೆ ಪ್ರಶ್ನಿಸಿದಾಗ, ಲೋಕೋಪಯೋಗಿ ಕಾರ್ಯಗಳು ಅನಿಷ್ಟವೇನಲ್ಲ, ಆದರೆ ಅವುಗಳಲ್ಲಿಯೇ ಆಸಕ್ತನಾಗಿ ಅವುಗಳಿಗಿಂತಲೂ ಹಿರಿದಾದ ಅಂತರಂಗದ ಪ್ರಪಂಚವನ್ನು ಉಪೇಕ್ಷಿಸುವುದು ಅನಿಷ್ಟ. ಹೊರಗೆ ಕೆರೆ ಕಟ್ಟುವುದು ಎಷ್ಟು ಅಗತ್ಯವೋ ಅಷ್ಟೇ, ಅದಕ್ಕೂ ಹೆಚ್ಚು ಅಗತ್ಯವಾದುದು ಒಳಗಿನ ಕೆರೆ ಎಂದರ, ಆಗ ಅದೆಂಥ ಕೆರೆ? ಎಂದು ಸಿದ್ಧರಾಮರು ಕೇಳಿದರುತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ,ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದಪರಮಾನಂದವೆಂಬ ಜಲವ ತುಂಬಿಕೆರೆಯ ಕಟ್ಟಬಲ್ಲವರನಾರನೂ ಕಾಣೆ !ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ. / 876 ಅನ್ನವನಿಕ್ಕಿದರೆ ಮತ್ತೆ ಹಸಿವಾಗುತ್ತದೆ. ಅರವಟಿಗೆಯನ್ನಿಟ್ಟು ನೀರು ಕುಡಿಸಿದರೆ ಮತ್ತೆ ನೀರಡಿಕೆಯಾಗುತ್ತದೆ. ಕೆರೆ ಕಟ್ಟಿಸಿದರೆ ಒಮ್ಮಿಲ್ಲೊಮ್ಮೆ ಒಡೆದುಹೋಗುತ್ತದೆ. ತನುವಿನಲ್ಲಿಯೇ ಸ್ಥಿರವಾದ ಕೆರೆಯನು ಕಟ್ಟಿ ಅದರಲ್ಲಿ ಪರಮಾನಂದದ ಜಲವನ್ನು ತುಂಬಿ, ಆ ಆನಂದದ ಅರವಟ್ಟಿಗೆಯನ್ನಿರಿಸಿ ಆ ಆನಂದದ ಅಮೃತವನ್ನು ಒಮ್ಮೆ ಪಾನ ಮಾಡಿದವರು ಮತ್ತೆ ಹಸಿಯದಂತೆ ನೀರಡಿಸದಂತೆ ಮಾಡುವದರಲ್ಲಿಯೇ ಮೇಲ್ಮೆಯಿದೆ ಇದು ಸಿದ್ಧರಾಮರಿಗೆ ಪ್ರಭುವಿತ್ತ ಪ್ರಬಾಮಯ ಸಂದೇಶವಾಗಿತ್ತು. ಅಷ್ಟೇ ಅಲ್ಲದೇ ಅಲ್ಲಮರು ಈ ಕೆಳಗಿನಂತೆ ತಿಳಿಸುತ್ತಾದೇಹದೋಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯವೇಕೆ? ಗುಹೇಶ್ವರಾ, ನೀನು ಕಲ್ಲಾದರೆ ನಾನೇನಪ್ಪನಯ್ಯ.? ಎನ್ನುತ್ತಾ ಮುಂದೆ ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ-ಗುಹೇಶ್ವರಾ / 609ಎಂದು ವಿವರಿಸಿದಾಗ, ಸಿದ್ಧರಾಮರ ತಿಳಿವಿನ(ಅರಿವಿನ) ಕಣ್ಣು ತೆರೆಯಿತು. ಅಣುವಿನೊಳಗೆ ಅಣುವಾಗಿಪ್ಪಿರಿ, ಎಲೆ ದೇವಾ, ನೀವು;ಮನದೊಳಗೆ ಘನವಾಗಿಪ್ಪಿರಿ ಎಲೆ ದೇವಾ.ಜಗದೊಳಗೆಲ್ಲಿಯೂ ನೀವಿಲ್ಲದೆಡೆಯುಂಟೆ?ಎಂಬತ್ತು ನಾಲ್ಕು ಲಕ್ಷ ಶಿವಾಲಯಂಗಳ ಮಾಡಿನೀವು ಒಮ್ಮನದೊಳಗಿಪ್ಪುದ ಕಂಡು ನಾನು ಮಾಡಿದೆನಲ್ಲದೆ,ಕಪಿಲಸಿದ್ಧಮಲ್ಲಯ್ಯಾ,ಎನಗೆ ಬೇರೆ ಸ್ವತಂತ್ರವಿಲ್ಲವೆಂದರಿವೆನು. / 72ಹೀಗೆ ಸಿದ್ಧರಾಮರು ಅಂತರಂಗದ ಅರಿವಿಗಾಗಿ ಕಲ್ಯಾಣಕ್ಕೆ ಆಗಮಿಸಿದರು. ಅಲ್ಲಮನು ಸಿದ್ಧರಾಮ ಬಲ್ಲಿದೆಲ್ಲರು ಬರಲುಕಲ್ಯಾಣ ಮನೆಗೆ ಕಳೆಬಂತು | ಬಸವಯ್ಯಎಲ್ಲಿ ಹೋದಲ್ಲಿ ಬೆಲ್ಲಾದ ||ಈ ನಾಡಿನ ಪ್ರೌಢರು, ಅನುಭಾವಿಗಳು, ವಿಚಾರಶೀಲರು ಆದ ಅಲ್ಲಮ-ಸಿದ್ಧರಾಮ ಮುಂತಾದವರು ಬರಲು ಕಲ್ಯಾಣದ ಮನೆ ಅಪೂರ್ವ ಕಳೆಯಿಂದ ಶೋಭಿಸಿತು. ಸಚೇತನ ಶಕ್ತಿಯಾದ ಗುರು ಬಸವಣ್ಣನವರು “ಎಲ್ಲಿ ಹೋದಲ್ಲಿ ಬೆಲ್ಲಾದ”ರು. ಎಂಬುದನ್ನು “ಬಸವಯ್ಯ ಎಲ್ಲಿ ಹೋದಲ್ಲಿ ಬೆಲ್ಲಾದ.” ಎಂಬ ಪದಪುಂಜದಲ್ಲಿ ತಿಳಿಯ ಬಹುದು ಪ್ರಭುದೇವ ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆದೋಯ್ದು ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಕೊಡಿಸಿದ. ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ. ಕಲ್ಯಾಣಕ್ರಾಂತಿಯ ನಂತರ ಸೊನ್ನಲಿಗೆಗೆ ಬಂದು ಅಲ್ಲಿಯೇ ಐಕ್ಯರಾದರು.ಸದ್ಯ ಸಿದ್ಧರಾಮರ ೧೧೬೨ ವಚನಗಳು ದೊರೆತಿದ್ದು ಅವುಗಳಲ್ಲಿ ವೈಯುಕ್ತಿಕ ಬದುಕಿನ ಸಂಗತಿಗಳು, ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ, ಕಾವ್ಯ ಗುಣ, ಸ್ವಾಭಿಮಾನ, ಆತ್ಮಸ್ಥೈರ್ಯ, ಭಾವ ತೀವ್ರತೆ ಮತ್ತು ಬಸವಣ್ಣನವರ ಗಾಢ ಪ್ರಭಾವ ಪ್ರಧಾನವೆನಿಸಿವೆ. ವೇಷದಲ್ಲಿ ಭಕ್ತನಾದಡೇನು, ವೇಷದಲ್ಲಿ ಮಹೇಶನಾದಡೇನು,ಗುಣವಿಲ್ಲದನ್ನಕರ ?ಕ್ಷಿರಕ್ಕೂ ತಕ್ರಕ್ಕೂ ಭೇದವೇನುಂಟು ?ರುಚಿಯಿಂದಲ್ಲದೆ ರೂಪದಿಂದವೆ ? ಕಪಿಲಸಿದ್ಧಮಲ್ಲಿಕಾರ್ಜುನಾ. / 1714ಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ಒಳ್ಳೆಯ ನಡೆನುಡಿಗಳನ್ನು ಹೊಂದಿಲ್ಲದ ವ್ಯಕ್ತಿಯು, ದೇವರಲ್ಲಿ ಒಲವು ಉಳ್ಳವನಂತೆ ಬಗೆಬಗೆಯ ಉಡುಗೆ ತೊಡುಗೆಗಳನ್ನು ತೊಟ್ಟುಕೊಂಡು, ಬಹುಬಗೆಯ ಆಚರಣೆಗಳಲ್ಲಿ ತೊಡಗುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.ಭಕ್ತ ಒಳ್ಳೆಯ ನಡೆನುಡಿಗಳಲ್ಲಿ ದೇವರನ್ನು ಕಾಣುವವನು. ಒಳ್ಳೆಯ ನಡೆನುಡಿಗಳಿಂದ ದೇವರನ್ನು ಒಲಿಸಿಕೊಳ್ಳುವವನು. ವೇಷದಲ್ಲಿ ಭಕ್ತನಾದಡೇನು ನಿತ್ಯದ ಬದುಕಿನ ಸಾಮಾಜಿಕ ವ್ಯವಹಾರದ ನಡೆನುಡಿಗಳಲ್ಲಿ ಒಳ್ಳೆಯವನಾಗಿ ಬಾಳದೇ, ನೋಡುವವರ ಕಣ್ಣಿಗೆ ದೇವರಲ್ಲಿ ಒಲವುಳ್ಳವನಂತೆ ಹೊರನೋಟಕ್ಕೆ ಕಾಣಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಮಾಜಕ್ಕೆ ಒಳಿತನ್ನು ಮಾಡುವಂತಹ ನಡೆನುಡಿಗಳಿರದಿದ್ದರೆ ಯಾವ ರೀತಿಯಲ್ಲಿ ಕಾಣಿಸಿಕೊಂಡರು ಪ್ರಯೋಜನವಿಲ್ಲ. ಆದ್ದರಿಂದ ಡಾಂಭಿಕತನವನ್ನು ಇಲ್ಲಿ ಕಟುವಾಗಿ ವಿರೋಧಿಸಲಾಗಿದೆ. ಹೊರನೋಟಕ್ಕೆ ಹಾಲು ಮತ್ತು ಮಜ್ಜಿಗೆಯ ಬಣ್ಣ ‘ಬೆಳ್ಳಗೆ ಒಂದೇ ರೀತಿಯಲ್ಲಿ ಕಂಡುಬರುತ್ತದೆ. ಆದರೆ ನಾಲಿಗೆಯಿಂದ ಸವಿದಾಗ, ಅವೆರಡರ ರುಚಿ ಬೇರೆ ಬೇರೆಯಾಗಿರುವುದು ತಿಳಿದುಬರುತ್ತದೆ. ಹೊರನೋಟಕ್ಕೆ ಕಂಡು ಬರುವ ರೀತಿಯೇ ಬೇರೆ. ಯಾವುದೇ ಬಗೆಯ ಉಣಿಸು ತಿನಸುಗಳನ್ನು ಸೇವಿಸಿದಾಗ ನಾಲಗೆಯ ಮೂಲಕ ಉಂಟಾಗುವ ಸಂವೇದನೆ ರುಚಿಯಿಂದ ತಿಳಿದು ಬರುತ್ತದೆಯೇ ಹೊರತು ರೂಪದಿಂದಲ್ಲ.ಯಾವುದೇ ವ್ಯಕ್ತಿಗಳನ್ನು ಅವರು ತೊಟ್ಟಿರುವ ಉಡುಗೆ ತೊಡುಗೆಗಳ ಮೂಲಕ ಒಳ್ಳೆಯವರು, ಕೆಟ್ಟವರು ಎಂದು ಅಳೆಯಬಾರದು. ಅವರು ಮಾಡುವ ಕೆಲಸಗಳ ಮೂಲಕ ಅವರ ವ್ಯಕ್ತಿತ್ವವನ್ನು ತಿಳಿಯಬೇಕೆಂಬ ಅರಿವನ್ನು , ಎಚ್ಚರವನ್ನು ಹಾಲು ಮತ್ತು ಮಜ್ಜಿಗೆಯ ಬಣ್ಣ ಮತ್ತು ರುಚಿಯ ರೂಪಕದ ಮೂಲಕ ಸೂಚಿಸಲಾಗಿದೆ ಅಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದಿರಾಗಿ, ಆನು ತನುಪ್ರಾಣ ಇಷ್ಟಲಿಂಗಿಯಾದೆನು.ಅಯ್ಯಾ, ನಿನ್ನ ಪ್ರಸಾದ ಪಾದೋದಕಕ್ಕೆ ಯೋಗ್ಯನಾದೆ.ಅಜಾತನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,ಆನು ನೀನೆಂಬ ಕನ್ನಡವಿನ್ನೇಕಯ್ಯ?ತನ್ನ ಅರಿವಿನ ಕುರುಹೇ ಈಗ ತನ್ನ ಕರಸ್ಥಲಕ್ಕೆ ಬಂದ ಕಾರಣ ತನ್ನ ತನುಪ್ರಾಣ ಇಷ್ಠಲಿಂಗಿಯಾದನು, ಸಮಾಜದ ಸೇವೆ, ಇಷ್ಟ ಲಿಂಗ ಪೂಜೆ ಎಂಬ ಶರಣರ ಆಶಯಗಳಿಗೆ ಬದ್ಧರಾದ ಸಿದ್ಧರಾಮರು ಸಮಷ್ಟಿ ಕಾಳಜಿಯಲ್ಲಿ ಲಿಂಗಾರ್ಚನೆ ಕಂಡ ಶ್ರೇಷ್ಠ ಸಾಧಕರು. ಪ್ರಸನ್ನ ಭಾವ ಹಾಗೂ ಜ್ಞಾನದ ಪಾದೋದಕವನ್ನುಂಡ ಬಳಿಕ, ಕಪಿಲ ಸಿದ್ಧಮಲ್ಲಿಕಾರ್ಜುನ ನಾನು ನೀನೆಂಬ ಬೇರೆ ಭಾವ ಉಂಟೆ ಎಂದು ದೇವರನ್ನೇ ಪ್ರಶ್ನಿಸುತ್ತಾರೆ. ಜಂಗಮವಾಗಿ ಫಲವೇನಯ್ಯಾ, ಜಗದ ಹಂಗುದೊರೆಯದನ್ನಕ್ಕ?ಯೋಗಿಯಾದಲ್ಲಿ ಫಲವೇನಯ್ಯಾ, ನಿನ್ನಂಗ ಬರದನ್ನಕ್ಕ,ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ. / 849* ಜಗದ ಅಂಗಳದಲ್ಲಿ ಅನವಶ್ಯಕ ಉಸಾಬರಿ, ಮೋಹ ಬೆಳೆಸಿಕೊಂಡರೆ ಅದು ಜಂಗಮದ ಲಕ್ಷಣವಲ್ಲ. ಜಂಗಮ ಎಂದರೆ ಚೈತನ್ಯ, ಚಲನಶೀಲತೆ ಎಂದರ್ಥ. ಅದೇ ರೀತಿ ಯೋಗಿ ಆಗಬೇಕಾದರೆ ಕಪಿಲಸಿದ್ಧ ಮಲ್ಲಿಕಾರ್ಜುನನ ಅಂಗವಾಗುವ ಸಾಧನೆ ಮಾಡಬೇಕು ಇಲ್ಲದಿದ್ದರೆ ಯೋಗಿ ಎನಿಸಲಾರ ಎಂದು ತನ್ನ ಯೋಗಸಾಧನೆಯ ಕುರುಹನ್ನು ಅರುಹಿದ್ದಾನೆ. ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತುತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತುತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತುತಾ
ಯೋಗಿ ಸಿದ್ಧರಾಮ-ವಿಶೇಷ ಲೇಖನ Read Post »









