ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಮತಾ ರವೀಶ್ ಪಡ್ಡoಬೈಲ್

ಹಣತೆಗೊಂದು ಶರಣು

ಹಚ್ಚುತ್ತೇನೆ ಹಣತೆ ಬೆಳಗು ನೀನು
ಆಗಸಕೆ‌ ಮುಖ ಮಾಡಿ ತನ್ನೊಳಗೆ ತಾನುರಿದು
ಗಾಳಿಯೊಂದಿಗೆ ಲೀನವಾಗಿ
ಜಗಕ್ಕೆಲ್ಲ ಬೆಳಕಾಗಿರಲೆಂದು

ಬೀಸೋ ಗಾಳಿಗೆ‌ ತಲೆದೂಗಿ
ತಾನುರಿದ ಜಗವನ್ನು ಕತ್ತಲೆ ಮಾಡಿ
ಪರರಿಗೆ‌ ಬೆಳಕೋ‌ ನೀಡೋ ಪರಿ
ನಿನಗೆ ನೀನೇ ಸಾಟಿ..

ಜಗಬೆಳಗೋ ನಿನಗೆ ಹಮ್ಮು ಬಿಮ್ಮು ಗಳಿಲ್ಲ
ನಿನ್ನನ್ನು ಬೆಳಗಿಸಲು ಕಾರಣಳಾದ
ನನಗೆ ಜಗವೇ ನನ್ನೊಳಗಿದ್ದಂತೆ
ನಾನೇ ಬೆಳಗಿದೆನೆಂಬ ರೀತಿಯಲಿ.

ಮನೆಮನೆಯಲ್ಲೂ ಬೆಳಗುವ ನಿನಗೆ
ಜಾತಿ ಮತ‌ಗಳ ನೆರಳಿಲ್ಲ ನಿನ್ನೊಳಗೆ
ಹಣತೆ ಹಚ್ಚುವ ನಾನು ಜಾತಿ ಧರ್ಮದ
ಸಂಕೋಲೆಯೊಳಗೆ ಬಂಧಿಯಾಗಿರುವೆ
.

ಆದರೂ ನಾನು
ಅಂತರಂಗದ ಕತ್ತಲೆಯ‌ ಕಳೆಯುತ
ಸದಾ ಮಂದಹಾಸದಿ ಶೂನ್ಯಳಾಗಿ
ನೀ ಬೆಳಗೋ ರೀತಿಯಲಿ ಬೆಳಕಾಗಿರಬೇಕೆಂಬ‌ ಆಸೆಯಲ್ಲಿ..

ಈ ದಿನವೂ ಮಾತ್ರವಲ್ಲ‌ ಪ್ರತಿದಿನವೂ‌
ಹಚ್ಚುತ್ತೇನೆ ಹಣತೆ
ಶುಭ್ರ ಹೃದಯ ಮಂದಿರದಲ್ಲಿ
ಪ್ರಕೃತಿಗೆ ಶರಣಾಗಿ ಜಗದೊಳಿತಿಗೆ ಶುಭವಾಗಲೆಂದು…


ಮಮತಾ ರವೀಶ್ ಪಡ್ಡoಬೈಲ್

About The Author

1 thought on “ಮಮತಾ ರವೀಶ್ ಪಡ್ಡoಬೈಲ್ ಕವಿತೆ- ಹಣತೆಗೊಂದು ಶರಣು”

Leave a Reply

You cannot copy content of this page

Scroll to Top