ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಚುನಾವಣಾ ತನಗಗಳು

ಪ್ರೊ. ಸಿದ್ದು ಸಾವಳಸಂಗ,ತಾಜಪುರ

೧
ಮತದಾನ ಬಂದಿದೆ
ಮತ ಚಲಾಯಿಸಿರಿ
ಹಾಗೆಯೇ ಉಳಿದರೆ
ಹುಟ್ಟಿದ್ದಕ್ಕೂ ವ್ಯರ್ಥರಿ !!

೨
ಮತ ಮಾರಾಟಕ್ಕಿಲ್ಲ
ತಿಳಿದುಕೋ ಮನುಜ
ಹಣದಾಸೆಗೆ ಬಲಿ
ನೀನಲ್ಲವೋ ಕುಲಜ !!

೩
ಬೇಡ ಸ್ವಾರ್ಥ ಮನುಜ
ಮಾರಬೇಡಿರಿ ಮತ
ನೀವಾಗಿ ಪ್ರಾಮಾಣಿಕ
ದೇಶಕ್ಕದುವೇ ಹಿತ !!

೪
ಚುನಾವಣೆ ಬಂದಿದೆ
ಹಾಕಿ ಎಲ್ಲರೂ ಓಟು
ಅತಿಯಾಸೆಗೆ ಬಲಿ
ಕೇಳಬೇಡಿರಿ ನೋಟು !!

೫
ಯುವಜನತೆ ಏಳಿ
ದೇಶ ನಿಮ್ಮದೇ ಆಸ್ತಿ
ಇಷ್ಟು ದಿನ ಮಲಗಿ
ಸಾಧಿಸಿದ್ದಿದ್ದು ನಾಸ್ತಿ !!


ಪ್ರೊ. ಸಿದ್ದು ಸಾವಳಸಂಗ,ತಾಜಪುರ








About The Author

Leave a Reply

You cannot copy content of this page

Scroll to Top