ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಕವಿತೆಗಳು

ಅರುಣಾ ರಾವ್

ಅಭ್ಯಂಜನ

ಚಿತ್ರಕೃಪೆ-ಗೂಗಲ್

ವಾರದ ರಜೆಯ ದಿನದಂದು
ಮಾಡಲೇ ಬೇಕು ಅಭ್ಯಂಜನ ||

ಹಿಂದಿನ ದಿನವೇ ಹಂಡೆಯ ತುಂಬ
ನೀರನು ತುಂಬಿಸಿ ಇಡಬೇಕು|
ಮರುದಿನ ಬೆಳಗಿನ ಜಾವಕೆ ಎದ್ದು
ಹಂಡೆಗೆ ಉರಿಯನ್ನು ಹಾಕಬೇಕು|

ಚಿತ್ರಕೃಪೆ-ಗೂಗಲ್

ಅಮ್ಮನು ಹಾಕಿದ ಹಸೆಮಣೆ ಮೇಲೆ
ಎಲ್ಲರೂ ಸಾಲಾಗಿ ಕೂರಬೇಕು|
ತಲೆಗೆ ಕೆನ್ನೆಗೆ ಕೈಕಾಲುಗಳಿಗೆ
ಎಣ್ಣೆಯ ತಿಕ್ಕಿಸಿಕೊಳ್ಳಬೇಕು|

ಕೆನ್ನೀರಿನ ಆರತಿ ಎತ್ತುವ ಸಮಯದಿ
ತಟ್ಟೆಗೆ ಕಾಣಿಕೆ ಹಾಕಬೇಕು|
ಮೂರ್ನಾಲ್ಕು ಗಂಟೆ ನೆನೆದ ನಂತರ
ಅಭ್ಯಂಜನ ಸ್ನಾನಕೆ ನಡೀಬೇಕು|

ಬಿಸಿ ಬಿಸಿ ಹಬೆಯಾಡುವ ನೀರನು
ಹುಯ್ದುಕೊಳ್ಳುತ ಮೀಯಬೇಕು|
ಬಿಸಿ ಬಿಸಿ ಅಡುಗೆ ತಿಂದು ನಿದ್ರಿಸಿ
ಸವಿಗನಸಗಳನು ಕಾಣಬೇಕು|

ಅಭ್ಯಂಜನ ಮಜವನು ಜೀವನದಲ್ಲಿ
ಒಮ್ಮೆಯಾದರೂ ಪಡೀಬೇಕು|
ಕಂಡೀಷನರ್ರು ಶಾಂಪು ಹಾಕದೆಯೇ
ಕೂದಲು ಫಳಫಳ ಹೊಳೀಬೇಕು|


About The Author

Leave a Reply

You cannot copy content of this page

Scroll to Top