ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಝಲ್

ಬದಲಾವಣೆ ಜಗದ ನಿಯಮವೆಂದು
ಕರೆದಿದ್ದಾರೆ ನೋಡು
ಬದುಕಿನ ಪುಟಗಳನು ಮೌನದಲಿ
ತೆರೆದಿದ್ದಾರೆ ನೋಡು

ನಿಸರ್ಗವೂ ಹೀಗೆ ಅಲ್ಲವೇ ಒಂದೆತೆರನಾಗಿ
ಇರುವುದೆ ಇಲ್ಲ
ಹಸನು ಮನದೊಳು ನವಭಾವಗಳ
ಸುರಿದಿದ್ದಾರೆ ನೋಡು

ಸಮಚಿತ್ತದಿ ಬಾಳಿನ ಬಂಡಿಯನು
ಸಾಗಿಸಬೇಕಲ್ಲ ನಾವು
ಸಮವಿಲ್ಲದ ಕನಸುಗಳಿಗೆ ಸದ್ಗುಣಗಳ
ನೀರೆರಿದ್ದಾರೆ ನೋಡು

ಒಬ್ಬೊಬ್ಬರೂ ಒಂದೊಂದು ರೀತಿಯಿಲ್ಲದ
ಜಗವೇ ವಿಚಿತ್ರ
ಅಬ್ಬಬ್ಬಾ ಎನುವಂತೆ ಐಕ್ಯತೆಯನು
ಮೆರೆದಿದ್ದಾರೆ ನೋಡು

ಅಭಿನವನೆಟ್ಟ ಆಲದಮರಕ್ಕೆ ನೇತು
ಬೀಳವುದು ಸರಿಯಲ್ಲ
ನಭದ ಬೆಳಕಾಗಿ ಭೂಮಂಡಲವನು
ಬೆಳಗಿದ್ದಾರೆ ನೋಡು


About The Author

Leave a Reply

You cannot copy content of this page

Scroll to Top