ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿ

ತನಗಗಳು

e.

೧
ಕಿರು ನಗೆಯಲಿವೆ
ನೂರು ಕವಿತೆ ಭಾವ
ನಕ್ಕು ಬಿಡು ಒಮ್ಮೆಲೇ
ಉಕ್ಕಿ ಬಿಡಲಿ ಕಾವ್ಯ
೨
ತಾಯಿ ಪ್ರೀತಿಗೆ ಸಮ
ಜಗದೊಳಾವುದಿಲ್ಲ
ತ್ಯಾಗ ಮೂರ್ತಿ ಅವಳು
ಧಾರೆ ಎರೆವಳೆಲ್ಲ
೩
ಹುಡುಕುತ ಇರುವೆ
ಪ್ರೀತಿಯ ಪರಿಭಾಷೆ
ಜೀವಪೂರ್ತಿ ಕಳೆದೆ
ಸಿಗದಾಗಿ ನಿರಾಸೆ
೪
ಸಾವಿನ ಮನೆ ತುಂಬ
ಸಾವಿರ ಜನ ಜಾತ್ರೆ
ತರಲಾಗದಾರಿಗೂ
ಹೋದ ಜೀವ ಮತ್ತೆ!
೫
ಬೇಸಿಗೆ ಬಂತೆಂದರೆ
ತಾಳಲಾಗದ ತಾಪ
ಬಸವಳಿದ ಜನ
ಹಾಕುತಿಹರು ಶಾಪ


About The Author

Leave a Reply

You cannot copy content of this page

Scroll to Top