ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ ಕಲಬುರಗಿ

ಗಝಲ್

l.

ಯಾತನೆಗಳ ಸುಡಲೊಂದು ಸ್ಥಳವಿರಬೇಕಿತ್ತು
ನೋವುಗಳ ಹೂಳಲೊಂದು ಮಸಣವಿರಬೇಕಿತ್ತು

ಸುಂದರ ಕಾಮನಬಿಲ್ಲು ಸಂತಸ ನೀಡದಾದಾಗ
ಕಂಬನಿ ಹರಿದು ಸೇರಲೊಂದು ಸರೋವರವಿರಬೇಕಿತ್ತು

ಹಳಸಿದ ಆಸೆಗಳ ಅನ್ನ ನೋಡಿ ಹಸಿವು ತಲ್ಲಣಿಸಿದೆ
ಹರಿದ ಕನಸು ಹೊಲಿಯಲೊಂದು ದಾರವಿರಬೇಕಿತ್ತು

ಹುಸಿ ಮಾತುಗಳ ಸೋಗಿಗೆ ಮೌನ ಮಿಡಿದಿದೆ ನೋಡಾ
ಮಡಿದ ಭರವಸೆಯು ಅರಳಲೊಂದು ಮರವಿರಬೇಕಿತ್ತು

ಬದುಕಿದು ನಾಲ್ಕು ಪುಟಗಳ ಪುಸ್ತಕ ‘ವಾಣಿ ‘
ದಣಿದ ಭಾವ ವಿರಮಿಸಲೊಂದು ಪುಟವಿರಬೇಕಿತ್ತು


About The Author

4 thoughts on “ವಾಣಿ ಯಡಹಳ್ಳಿಮಠ ಕಲಬುರಗಿ -ಗಝಲ್”

  1. ತುಂಬಾ ಆಳವಾಗಿದೆ ಗಜಲ್.”ಇರಬೇಕಿತ್ತು” ಎನ್ನುವ ರೂಪಕವು ನೆಪ ಮಾತ್ರ.ಆದರೆ,ಹೂಳಿಡುವ ಪ್ರತಿಮಾ ಸಂಕೇತವು ಗಜಲ್ ಕಿರೀಟವಾಗಿದೆ.

Leave a Reply

You cannot copy content of this page

Scroll to Top