ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಅನುದಿನ

ಸಂಜೆಯ ಬುದ್ಧ
ಮುಸ್ಸಂಜೆಯ ಸಿದ್ಧ ಸಿದ್ಧೇಶ್ವರ
ಒಬ್ಬ ಜ್ಞಾನ ಪ್ರವರ್ತಕ
ಮತ್ತೊಬ್ಬ ಮಹಾ ಸಾಧಕ

ಮೂಡಣದ ರವಿ ಪಡುವಣದ
ನಿರ್ಗಮನದೆಡೆ ನಮಗೆ
ಬದುಕಿನ ಬೆಳಕು
ಪ್ರಖರತೆಯ ಪ್ರವರ್ತಕ

ನಿಶೆಯ ನಷೆಯಲ್ಲಿ
ವಿಶ್ರಾಂತ
ಬದುಕಿನ ಬೆಳಕು, ಪ್ರಖರ ಬಿಸಿಲಿನ ತಾಪ ಮರೆಸಿ ಝಳಝಳಿಸುವ ಬೆವರು
ಅವಿರ್ಭವಿಸಿ
ಸಂಧ್ಯಾವಂದನೆಯ
ಉಲ್ಲಾಸ
ಉತ್ಸಾಹ

ಹೊಸ ಹೊಸ ಹರ್ಷ
ದಿನ ದಿನ ಯುಗಾದಿ
ಶುಕ್ಲ ಪಕ್ಷದಿಂದ ಕೃಷ್ಣ ಕ್ಕೆ
ಪ್ರಾತಃಸ್ಮರಣೀಯನಾಗು
ಪ್ರತಿ ಸಂಧ್ಯೆಯ
ಅನು ಸ್ಮರಣೀಯನಾಗು

ಅನಂತನಾಗು
ಬುದ್ಧನಾಗು
ಸಿದ್ಧನಾಗು ಅನುದಿನ
ಅವಿರತ


About The Author

20 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಅನುದಿನ”

  1. ಸುಂದರ ಕವಿತೆಗಳನ್ನು ಬರೆಯುವ ನಿಮ್ಮ ಈ
    ಅವಿರತ ಪ್ರಯತ್ನ ಶಾಶ್ವತವಾಗಿರಲಿ.

  2. Dr K B SuryaKumar

    ವೆಂಕಣ್ಣ. ಎಷ್ಟು ಹೊಗಳಲಿ ನಿಮ್ಮ ಕವನಗಳನ್ನ

    1. D N Venkatesha Rao

      ಹೊಗಳಿ ಹೊನ್ನ ಶೂಲಕ್ಕೇರಿಸಿರುವುದಷ್ಟು!
      ಥ್ಯಾಂಕ್ಸ್ ಸೂರ್ಯ

  3. ಅಶೋಕ ಹಂಪಣ್ಣವರ, ಸವದತ್ತಿ

    ಸವಿನಯ ವ್ಯಕ್ತಿತ್ವ ಆಹ್ಲಾದಕರ ಕವನಗಳು ಇದೇನು ಸಂಭ್ರಮ ಸಂತೋಷ ನಿಮಗೆ ಶುಭವಾಗಲಿ ನಿರೀಕ್ಷೆಯಲ್ಲಿರುವೆ ಮತ್ತೆ ಮತ್ತೆ ಕಾವ್ಯ ಸಿಂಚನಕ್ಕೆ……

    1. D N Venkatesha Rao

      ಧನ್ಯವಾದಗಳು ಅಶೋಕ್, ನಿಮ್ಮ ಎಲ್ಲಾ ಪ್ರಶಂಸೆ ಗಳಿಗೆ !

Leave a Reply

You cannot copy content of this page

Scroll to Top