ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರಜಿನಿ ಟಿ.ಎಂ

ಭರವಸೆ

ಆಸೆಯ ಅತಿಸಾರಕೆ
ಹೆಸರೇಕೆ ? ಭರವಸೆ
ನಲಿವ ಹೂವಿನ
ನಗುವಿಗೆ ಸಾಕಲ್ಲವೆ

ದೋಚುವ ದಾರಿದ್ರ್ಯಕೆ
ಸಾಕ್ಷಿ ಭರವಸೆಯೇ ?
ಉದುರಿದೆಲೆಯ ಧೈರ್ಯ
ಚಿಗುರಿನ ಚೆಲುವಲ್ಲವೆ

ತುಳಿದು ತಣಿಸುತಿರುವ
ಬದುಕು ಭರವಸೆಯೇ ?
ಮುಳುಗೋ ಸೂರ್ಯ
ಉದಯಿಸುವ ದಿಕ್ಕಲ್ಲವೆ

ಅಲ್ಪ ಬುದ್ಧಿಯ
ಜ್ಞಾನ ಭರವಸೆಯೇ ?
ಸಜ್ಜನರ ಸಂಗವು
ಹೆಜ್ಜೇನು ಸವಿದಂತಲ್ಲವೆ

ಹಸಿರ ಕೊಂದು ಕೊಂಡ
ಉಸಿರು ಭರವಸೆಯೇ ?
ಉಸಿರಗಟ್ಟಿ ಉಸಿರ ನೀಡೋ
ತಾಯಿಯ ಮಡಿಲಲ್ಲವೆ


ರಜಿನಿ ಟಿ.ಎಂ

About The Author

9 thoughts on “ರಜಿನಿ ಟಿ.ಎಂ ಕವಿತೆ-ಭರವಸೆ”

Leave a Reply

You cannot copy content of this page

Scroll to Top