ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಾಯ್ಕುಗಳು

ಸಿದ್ದಲಿಂಗಪ್ಪ ಬೀಳಗಿ


ಮೌನದೊಳಗೂ
ಮಾತಿದೆ; ಹೃದಯದ
ಭಾಷೆಯದುವೆ!

ಸುಂದರಾಂಗನೆ
ಕಂಡ ಕ್ಷಣ; ಮನದಿ
ಮಹಾ ಸುನಾಮಿ

ಗೊರಕೆ ಸದ್ದು
ಅಬ್ಬಾ! ಒದರುವಂತೆ
ಹಳೆಯ ಬಸ್ಸು!!


ಹದವರಿತು
ಬೀಜ ಹಾಕು ಭೂಮಿಗೆ
ಸಮೃದ್ಧ ಬೆಳೆ

ಬರೀ ಸೋಲಲ್ಲ
ಅದು; ಸದ್ದು ಮಾಡದ
ಶರಣಾಗತಿ


About The Author

Leave a Reply

You cannot copy content of this page

Scroll to Top