ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನನ್ನೂರು ನನ್ನೊಳಗಿದೆ.

ಶ್ರೀಕಾಂತಯ್ಯ ಮಠ

ನೋವಿನ ವಲಯ ನನ್ನ ಹೃದಯವೀಗ ಅಳುತ್ತಿದೆ ರಮಿಸುವ ಕೈಗಳು ದೂರವಾಗಿ ಯಾರನ್ನೊ ಕರೆಯುತ್ತಿವೆ.

ನನ್ನಾಳದ ಎತ್ತರ ಯಾರೂ ಸುಳಿವಿಲ್ಲ ಅವರಿಗೂ ಭಯ.. ಗೊತ್ತಿಲ್ಲ
ಮಾಡಿದ ತಪ್ಪೇನು ತಿಳಿದಿಲ್ಲ ಇನ್ನೂ ಅಂತರಂಗದ ನೋವಿಗೆ ನಾಟಿ ಔಷಧ ಸಿಕ್ಕಿಲ್ಲ.

ಎತ್ತ ಹೋಗಲಿ ಕಲ್ಲುಗಳು ಹಾರಿ ಬರುತ್ತವೆ ದುಃಖದ ಒಡಲಿಗೆ ಏಟು ಕೊಡುತ್ತಿವೆ
ಯಾರನ್ನು ತಡೆದರೂ ಬರಿ ನೆಪ ಹೇಳುವರೆ ಎದುರಾಗುವರು ನನ್ನ ಬಾಧೆ ಅವರಿಗಿನ್ನೂ ಆಗಿಲ್ಲ.

ನಾನೊಬ್ವ ಭಾಗ್ಯವಿಲ್ಲದ ಬಳೆಗಾರನಾಗಿದ್ದೇನೆ
ಅಂತರಾಳದ ಕೂಗು ಯಾರಿಗೂ ಮುಟ್ಟಿಲ್ಲ
ಎದೆ ತಟ್ಟಿಲ್ಲ…!!
ಚಪ್ಪಳೆ ಶಬ್ದವಂತೂ ಎಷ್ಟೊ ದಿನಗಳು ಲೆಕ್ಕ ಹೇಗೆ ಹೇಳಲಿ..!!
ಪಕ್ಕ ನಾಜೂಕು ಮಂದಿಯೊಳಗ ನಾ ಹೆಂಗ ಕೊಡಲಿ..

ಇದ್ದವರಿಗೆ ಸ್ವಲ್ಪ ಬೆಲೆಯುಂಟು ನಾನೆಲ್ಲಿ ಹಂಚಿ ಕೊಡಿರಿ ಎನ್ನಲಿ..!!
ಅವರೀಗ ಸೂಕ್ಷ್ಮ ಮತಿಗಳಾಗಿದ್ದಾರೆ
ನಾ ಎತ್ತಿ ಕೊಳ್ಳುವ ಕೂಸೆ..?
ಕತ್ತೆತ್ತಿ ನೋಡದಂಗ ಇರುವ ಮಂದಿಯೊಳಗ ನಾನು ಯಾರು…?

ನಾನಿದ್ದೆ ಹಾದಿ ಮುಂದ ಮನೆಯೊಳಗ ಯಾರಿಗೂ ಕಾಣಲಿಲ್ಲ
ಯಾರಂತೆ..!! ಎನ್ನುವ ರೀತಿಗೆ ಊರಿನವನು
ನನ್ನನ್ನು ಬೇರ್ಪಡಿಸಿ ಊರು ಒಂದಾಗಿತ್ತು.
ಕೂಗದ ಧ್ವನಿ ನನ್ನದು
ಬಾರದವರಿಗೆ ಕಾಯಲಿಲ್ಲ
ಬದುಕು ನನ್ನಂತೆ ಹಾದು ಹೋಗುತ್ತಿತ್ತು.

ಏನುಂಟು ಏನಿಲ್ಲ ಎನ್ನುವ ಸ್ಥಿತಿಯಲ್ಲಿ ಏಕಾಂಗಿ
ಪರಿಸ್ಥಿತಿ ಮೀರಿ ಬಂದದ್ದನ್ನು ಎದುರು ಹಾಕೊಂಡಿದ್ದೆ
ಇಲ್ಲಿ ಇದ್ದವರ ಜಗತ್ತು ಮೆರೆಯುತ್ತಿದೆ
ನಾನು ನೋಡಬೇಕು ಅಷ್ಟೆ …!!
ಹುಟ್ಟಿದ ಊರಲ್ಲ ಬೆಳೆದಿದ್ದ ಊರಲ್ಲ
ನನ್ನೂರು ನನ್ನೊಳಗಿದೆ ಯಾರಿಗೆ ಗೊತ್ತು ಉಸಿರು ಅಲ್ಲೆ ಕೊನೆಯಾಗಬಹುದು… ಬರ್ತೀರಲ್ಲಾ ನೀವು.

About The Author

Leave a Reply

You cannot copy content of this page

Scroll to Top