ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಗಜಲ್

ಬಿಡುವಿರದ ಬಾಳಲಿ ನನ್ನವಳನು ಓಲೈಸುತಿರುವೆ ಮುದ್ದಿಸಲು
ಚಿಂತೆಯ ಗೂಡಿನಲಿ ಸಮಯವ ಬಯಸುತಿರುವೆ ಮುದ್ದಿಸಲು

ಜೀವನವಿಡೀ ನಿನ್ನ ಕಾಲಿಗೆ ಗೆಜ್ಜೆಯಾಗಿರಲು ಪಣ ತೊಟ್ಟಿರುವೆ
ನನ್ನದಲ್ಲದ ವಿಧಿಯ ಕೃಪೆಗಾಗಿ ಹಂಬಲಿಸುತಿರುವೆ ಮುದ್ದಿಸಲು

ನಾಳೆಗಳ ಒತ್ತಡದಲಿ ಇಂದು ಉಸಿರಾಡುವುದೆ ಜೀವನವಾಗಿದೆ
ಏಕಾಂತದ ರಸಮಯ ತಾಣವನು ಅರಸುತಿರುವೆ ಮುದ್ದಿಸಲು

ಯುಗಯುಗಗಳಲೂ ಶೃಂಗಾರವೆ ಸಂಜೀವಿನಿ ರತಿ ಮನ್ಮಥರಿಗೆ
ಶಶಿಯು ನಾಚುವಂತೆ ಇರುಳನು ಸಿಂಗರಿಸುತಿರುವೆ ಮುದ್ದಿಸಲು

ಮಲ್ಲಿ ಹೃದಯ ನಿನ್ನ ಕನವರಿಕೆಯಲಿ ಪ್ರೇಮರಾಗ ಹಾಡುತಿದೆ
ಕಂಗೆಡಿಸುತಿರುವ ಆಭರಣಗಳನು ಜಾರಿಸುತಿರುವೆ ಮುದ್ದಿಸ


About The Author

Leave a Reply

You cannot copy content of this page

Scroll to Top