ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ನೀನೇನು ಹುಣ್ಣಿಮೆಯ ಚಂದ್ರನಾ?

ಭುಜದ ಮೇಲಾವರಿಸಿದ ಕರಿಮೋಡವಾ ಆ ನಿನ್ನ ಹೆರಳು? ತುಂಟತನವೇ ತುಳುಕಾಡುವ ಪ್ರೀತಿಯ ಶರಾಬೇ ನೀನಾ, ಅದನ್ನು ತುಂಬಿಕೊಂಡ ಮಧುಬಟ್ಟಲೇ ನಿನ್ನ ಕಣ್ಣುಗಳಾ?
ಆಖೆ ಹೆ ಜೈಸೆ ಮೈಕೆ ಪೆಯಾಲೆ ಭರೆ ಹುವೆ
ಮಸ್ತಿ ಹೆ ಜಿಸಮೆ ಪ್ಯಾರ್ ಕಿ ತುಂ
ವೋ ಶರಾಬ್ ಹೋ..
ಚೌದವೀ ಕಾ ಚಾಂದ್ ಹೋ

ಯಾ ಆಫ್ತಾಬ್ ಹೋ..

ಅಬ್ಬಾ, ನೀನೇನು ಹುಣ್ಣಿಮೆಯ ಚಂದ್ರನಾ ಅಥವಾ ಸೂರ್ಯರಶ್ಮಿಯಾ? ಏನೋ ಗೊತ್ತಿಲ್ಲ ನನಗೆ, ಆದರೆ ಆ ದೇವರಾಣೆ ನೀನು ಮಾತ್ರ ಅಸಮಾನ, ಅನುಪಮ, ಅದ್ಭುತ..

ನೀ ಬಂದಾಗಲೇ ನಿನ್ನ ಕಂಡಾಗಲೇ ನಾನು ಸೋತು ಹೋಗಿದ್ದೆನಲ್ಲ. ನಿನ್ನ ಹೆಜ್ಜೆ ತಾಳಕ್ಕೆ ನನ್ನ ಹೃದಯ ತಾಳ ತಪ್ಪಿತ್ತಲ್ಲ. ಮತ್ತೇನು ತಾನೇ ಹೇಳಬಲ್ಲೆ?
ನಡೆವಾಗ ನಿನ್ನ ಮೈಮಾಟವೇನು
ಆ ಹೆಜ್ಜೆತಾಳಕೆ ಮೈಮರೆತು ಹೋದೆನು
ಆ ಹೂನಗೆ ಕಂಡೆನು ಸೋತೆನು
ನಿನ್ನ ಸೆರೆಯಾದೆನು..

ಚೆಹೆರಾ ಹೆ ಜೈಸೆ ಝೀಲ್ ಮೆ
ಹಸ್ತಾ ಹುವಾ‌ ಕವಲ್
ಯಾ ಜಿಂದಗಿ ಕೆ ಸಾಝ್ ಪೆ
ಛೇಡಿ ಹುಯಿ ಗಝಲ್..

ತಿಳಿಗೊಳದಲ್ಲರಳಿದ ಕಮಲದ ಹಾಗೆ ನಿನ್ನ ಆ ದುಂಡುಮುಖ, ಜೀವನದ ತಂತಿ ಮೀಟಿದ ಮಧುರ ಭಾವಗೀತೆಯೇ ನೀನು, ಯಾರೋ ಕವಿಯೊಬ್ಬ ಕಂಡ ಸುಂದರ ಕನಸೇ ನೀನು..ಇದಕ್ಕಿಂತ ಇನ್ನೇನು ತಾನೇ ವಿಶೇಷವಿರಲು ಸಾಧ್ಯ?

ಮಿಂಚಿನ ಬಳ್ಳಿಯಂಥ ನಗುವೇ ನಾಟ್ಯವಾಡುತ್ತಿರುವ ಹಾಗಿದೆಯಲ್ಲ ನಿನ್ನ ಮುದ್ದು ತುಟಿಗಳ ಮೇಲೆ..
ಹೋಟೋಪೆ ಖೇಲ್ ತೀ ಹೆ
ತಬಸ್ಸುಮ್ ಕಿ ಬಿಜಲಿಯಾ
ಸಜದೆ ತುಮ್ಹಾರಿ ರಾಹ್ ಮೆ
ಕರತೀ ಹೆ ಕೈಕಶಾ
ದುನಿಯಾ ಯೆ ಹುಸ್ನ್ ಇಷ್ಕ್
ಕಿ ತುಮ್ ಹೀ ಶಬಾಬ್ ಹೋ..

ನೀ ಬರುವ ದಾರಿಯಲ್ಲಿ ಎಲ್ಲ ತಲೆಬಾಗಿಬಿಡುವರಲ್ಲ, ಈ ಚೆಲುವು ಮತ್ತು ಒಲವೇ ತುಂಬಿರುವ ಲೋಕಕ್ಕೆ ತಾರುಣ್ಯವತಿಯೆಂದರೆ ಅದು ನೀನಲ್ಲದೆ ಇನ್ಯಾರಾದರೂ ಆಗಲು ಸಾಧ್ಯವಾ..

Natural frosted pink lips

ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ
ತಾವರೆಯ ಅಂದ ಕಣ್ಣಲ್ಲಿ ತಂದ

ನಿಜವಾಗಿ ನಿನ್ನ ನೋಡಿದಾಗ ನಾನು ಹೀಗೆ ಮರುಳಾದೆ. ಆ ದೇವರೇ ಕಾಣಿಕೆ ನೀಡಿದ ನನ್ನ ಜೊತೆ ಮಾಡಿದ ಎಂದು ಎಷ್ಟೆಲ್ಲ ಆನಂದ ಪಟ್ಟಿರುವೆ. ನೀನು ಆಕಾಶದಿಂದ ಧರೆಗಿಳಿದ ರಂಭೆಯೇ ಇರಬೇಕು..ನನಗಾಗಿ ಬಂದ ಚಂದನದ ಗೊಂಬೆಯೇ ಇರಬೇಕು!


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

About The Author

Leave a Reply

You cannot copy content of this page

Scroll to Top