ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೊಂಗೆ ತಂಪು

ಮಾಜಾನ್ ಮಸ್ಕಿ

ಹೇಳದೇ ನೀ ಮನದಲ್ಲಿ
ಬಚ್ಚಿಟ್ಟಿಕೊ
ಕಂಗಳಲ್ಲೇ ಸವಿಯುವೆ

ಮೌನದ ಮಾತು
ಅದೇಷ್ಟೋ ಚೆನ್ನ…
ಗುರುವೇ ಇಲ್ಲದ
ಕೋಗಿಲೆ ಗಾನದಂತೆ
ಈ ಪ್ರೇಮ ಯಾನ

ವರ್ಣಮಯ ಸೊಬಗಿನಲಿ
ಶೃಂಗಾರ ಚಿಮ್ಮುವೆ
ಪ್ರೇಮದ ಕಂಪನು ಸೂಸುತ್ತಿರು
ಒಲುಮೆಯಲಿ ನಾ ಬಳಸುವೆ

ತೋರುತ್ತಿರು ಹೀಗೆಯೇ ಪ್ರೀತಿ
ಹೂವಿಗೆ ಸುತ್ತುವ ಭ್ರಮರವಾಗಿ
ಹೊಂಗೆಮರವಾಗಿರು ಸದಾ
ಅದರಡಿಯ ತಂಪು ನಾನಾಗುವೆ


About The Author

Leave a Reply

You cannot copy content of this page

Scroll to Top