ಕಾವ್ಯ ಸಂಗಾತಿ
ಮಧುರಾ ಮೂರ್ತಿ
ಗಜಲ್


ಜಾರಿ ಹೋದ ಕಣ್ಣನೀರು ಮತ್ತೆ ಕಂಗಳ ಸೇರದು
ಕಳೆದು ಹೋದ ಕಾಲವೆಂದೂ ಮರಳಿ ಬಾಳಲಿ ಬಾರದು
ವ್ಯರ್ಥವೆಂದು ತಿಳಿದರೂ ಪಡೆಯುವ ಯತ್ನವೇಕೆ ಮಾಡುವೆ
ನಿತ್ಯ ಕರ್ಮದಲಿ ವಿಷಾದವಿರಲು ದುಗುಡಗಳು ಆರದು
ವೇದನೆಯ ದಳ್ಳುರಿಯಲಿ ಬೆಂದರೂ ಬದುಕು ಸವೆಯಲೇಬೇಕು
ವಾಸ್ತವಕೆ ಹೊಂದದೆ ಕುರುಡನಂತಾದರೆ ದಿಕ್ಕೇ ತೋರದು
ಸುಂದರ ಭವಿಷ್ಯ ಕಾಣಲು ಹಂಬಲ ಭರವಸೆಗಳು ಬೇಕು
ಕೊರಗಿನಲೇ ಕಾಲ ಕಳೆಯುತಿರಲು ಬದುಕಲಿ ಛಲವು ಇರದು
ಮಣ್ಣ ಋಣ ಮುಗಿಯುವ ತನಕ ಕತ್ತಲು ಬೆಳಕಿನೊಡನೆ ಹೋರಾಟ
ಮಧುರ ಮನದ ಭಾವಗಳು ತತ್ತರಿಸಿದರೂ ವಿಷವನ್ನು ಕಾರದು




1 thought on “ಮಧುರಾ ಮೂರ್ತಿ ಗಜಲ್”