ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಭಾರತಿ ಅಶೋಕ್

ಒಂದಿಷ್ಟು ಪ್ರೀತಿಗಾಗಿ

ಒಂದಿಷ್ಟು ಪ್ರೀತಿಗಾಗಿ
ಬರೀ ವೇದನೆ.
ಮುಗಿಲೆತ್ತರದ ಅಸೆಗೆ
ನೆಲ ಕಚ್ಚುವ ದೂಷಣೆ
ಪ್ರೀತಿಯ ಹೂ ಅರಳುತ್ತದೆ
ಬಾಡಿದರ್ಹೇಗೆ ಪ್ರೀತಿಯಾದೀತು
ಬಾಡುವ ಹೂ ಬರೀ ವೇದನೆ

ಪ್ರೀತಿಯ ಅರಮನೆಗೆ
ಇನಿ ಹೃದಯವೇ ಕಾವಲು
ಅರಮನೆಯೇ ಅಲುಗಿದರೆ
ಯಾತಕಾಗಿ ಪ್ರೀತಿಯ ಮಹಲು
ಪ್ರೀತಿಗೆ ಪ್ರತಿಯಾಗಿ ಬರೀ ವೇದನೆ.(ಒಂದಿಷ್ಟು)

ಒಂದಿಷ್ಟು ಪ್ರೀತಿಗಾಗಿ
ಬೆಟ್ಟದಷ್ಟು ಪ್ರೀರಿ ಬರಿ ಬಯಲಾಗಿ
ಕಣ್ಣೀರ ಕಡಲಾಗಿ ಹರಿದಾಗ
ಮೋಡ ಗುಡುಗದೇ
ಹನಿ ಮೂಡದೇ
ಹಸಿರು ಬಸಿರಾಗದೇ
ನೆಲ ನಗದಾದಾಗ
ಯಾತಕಾಗಿ ಬರಡು ಮೋಹ
ಪ್ರೀತಿ ಬರೀ ವೇದೆಗಾಗಿ(ಒಂದಿಷ್ಟು)

ಆಸೆಯ ರಾಶಿಯಲೇ
ಮಾರಣಹೋಮವಾದದ್ದು
ಪೈರಾಮಸ್ ಥೀಸ್ಬೆ ಒಂದಿಷ್ಟು ಪ್ರೀರಿಗಾಗಿ
ಸೀತೆಗೆ ಜಿಂಕೆ ಮರೀಚಿಕೆ
ಶಕುಂತಲೆಗೆ ದುಶಂತ ದುಃಸ್ವಪ್ನ
ಇದೆಲ್ಲಾ ಬರೀ ವೇದನೆಗಾಗಿ(ಒಂದಿಷ್ಟು)

ಮಾವುತನ ಮುಡಿ ಸೇರದ
ರಾಜ ಕಮಲ,ರಾಜ ಹಂಸ
ಯಶೋದರನ ಅಮೃತ ಪ್ರೀತಿಗೆ
ಬರೀ ವೇದನೆ(ಒಂದಿಷ್ಟು)

ಮನಃ ಮರುಗುತ್ತದೆ
ಒಂದಿಷ್ಟು ಪ್ರೀತಿಗಾಗಿ
ನಳ ದಮಯಂತಿಗಾಗಿ
ಮಹಾ ವಿರಾಗಿಣಿ ಅಕ್ಕ ಚನ್ನಲ್ಲಿಕಾರ್ಜುನನಿಗಾಗಿ ಹಪಹಪಿಸಿದ್ದು
ಒಂದಿಷ್ಟು ಪ್ರೀತಿಗಾಗಿ
ಅನುಭವಿಸಿದ್ದು ವಿರಹ ವೇದನೆ(ಒಂದಿಷ್ಟು)

ನೂರಾರು ಕೀಟ್ಸರಿ ಹುಟ್ಟಿ ಬಂದರೂ
ಜೀವ ಜಗತ್ತಿನಲಿ ಕಾಣುವುದೊಂದೆ
ಅದಕ್ಕಾಗಿ ಮಿಲ್ಟನ್ ಹಾಡುತ್ತಾನೆ
ಹಾಡುತ್ತಲೇ ಇರುತ್ತಾನೆ
ಒಂದಿಷ್ಟು ಪ್ರೀತಿಗಾಗಿ ಬರೀ ವೇದನೆಗಾಗಿ(ಒಂದಿಷ್ಟು)

ಪ್ರೀತಿ ಬರೀ ಕಲ್ಪನೆ
ಕೊಡಲು ಏನಿಲ್ಲ
ಪಡೆಯಲು ಏನೂ ಇಲ್ಲ
ಅದಕಾಗಿ ಚಕೋರಿ ಚಂದ್ರನಿಗಾಗಿ
ಹೂ ದುಂಬಿಗಾಗಿ
ನಾನು ನಿನಗಾಗಿ
ನೀನು ನನಗಾಗಿ ಹಾಡುತ್ತೇವೆ
ಕತ್ತಲಗೂಡಿನ ಹಕ್ಕಿಗಳಾಗಿ ಜೀವತ್ಶ್ಯವಗಳಾಗಿ ಪ್ರೀತಿಗಾಗಿ
ಬರೀ ವೇದನೆಗಾಗಿ

ರಣರಂಗ ನಂದಗೋಕುಲವಾಗಲು ಅರಮನೆ ಸಿಂಹಾಸನ ಗುಡಿಸಲು
ಬಿಸಿಯುಸಿರ ಅಪ್ಪಿಗೆಯೊಳಗೆ ಅರ್ಥ ಕಳೆದುಕೊಂಡು ಬರೀ ನಲುಗುತ್ತವೆ
ಪ್ರೀತಿಗಾಗಿ ಬರೀ ವೇದನೆಗಾಗಿ( ಒಂದಿಷ್ಡು)


About The Author

3 thoughts on “ಭಾರತಿ ಅಶೋಕ್”

Leave a Reply

You cannot copy content of this page

Scroll to Top