ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಯನ. ಜಿ. ಎಸ್

ಗಜಲ್

ತುಮುಲಗಳ ಸಿಕ್ಕಿನೊಳು ತ್ರಾಸವೀಗ ನಗುವುದು ಕನಸುಗಳ ಹೆಣೆಯಲಿ ಎಂತು
ಮೆರೆಯುತಿಹ ಕ್ಲೇಶಗಳಲಿ ದಣಿವೀಗ ಗೆಲ್ಲುವುದು ಸೋಲುಗಳ ಕೆಡಹಲಿ ಎಂತು

ಪರಿಧಿಯನು ಮುತ್ತದೇ ಮಸುಕಾಗುತಿದೆ ಭಾವಮಿಲನದ ರಸಸಾರ ಹೃನ್ಮನದಿ
ಜ್ವಲಿಸುತಿದೆ ಬಾಷ್ಪಗಳು ಜೀವನದ ಉಯ್ಯಾಲೆಯಲಿ ಕೊಂಡಿಗಳ ಬೆಸೆಯಲಿ ಎಂತು

ಬೆಂದ ವಾಂಛೆಗಳು ಮರುಗಿ ಸೊರಗುತಲಿದೆ ಸಖ್ಯವಿಲ್ಲದಿರಲು ಬಯಸಿದ ಜೀವ
ತಿವಿಯುತಿಹ ಲುಪ್ತತೆಯಲಿ ಕುಸಿಯುತಿದೆ ಧೀಶಕ್ತಿ ಮನಸ್ಸುಗಳ ನಂಬಲಿ ಎಂತು

ಸವಿ ಭಾವಗಳ ಮುಷ್ಕರದ ಬೇಡಿಯೊಳು ನಲುಗಿವೆ ಸುಖ ಭಾವಗಳ ದಿವ್ಯಾಂದಣ
ಒತ್ತಾಸೆಯ ಬಿಗುವಿಲ್ಲ ಬಾಳುವೆಯ ಪಥದಲ್ಲಿ ಗಮ್ಯಕೆ ಹಾರೈಕೆಗಳ ಹರಸಲಿ ಎಂತು

ಗರ್ಭದೊಳು ಇಣುಕುತಿಹ ಭೀತತ್ವಕೆ ಮರು ನುಡಿಯಲಾಗುತ್ತಿಲ್ಲ ನಯನಾಳಿಗೆ
ಬಿಸುಪು ಕಾಣದೆ ಕರಕಲಾಗುತಿವೆ ಆಕಾಂಕ್ಷೆಗಳು ಖೇದಗಳ ಮಣಿಸಲಿ ಎಂತು.


About The Author

Leave a Reply

You cannot copy content of this page

Scroll to Top