ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವಿತೆಯಾಗೊ ಆಸೆ

ನಾರಾಯಣ ರಾಠೋಡ

ಬಿಳಿಯ ಹಾಳೆಗಳಲ್ಲಿ ಅಕ್ಷರವಾಗುವ ಆಸೆ
ಕವಿಯ ಕೈಬೆರಳುಗಳಲ್ಲಿ ನಲಿದಾಡುವಾಸೆ
ಕವಿಯ ಕನವರಿಕೆಯ ಕವಿತೆಯಾಗೊ ಆಸೆ
ಕವಿ ಕಂಡ ಕನಸಿನ ಹಕ್ಕಿಗೆ ರೆಕ್ಕೆಯಾಗೊ ಆಸೆ

ಕನಸಿನ ಹುಡುಗಿಗೆ ಪ್ರೇಮಾಂಕುರವಾಗೊವಾಸೆ
ಅಳುವ ಮಗುವಿಗೆ ಜೋಗುಳವಾಗೊವಾಸೆ
ಬರಡಾದ ಮನಸ್ಸಿಗೆ ಭಾವವಾಗೊವಾಸೆ
ಕತ್ತಲೆಯಾದ ಬಾಳಿಗೆ ಬೆಳಕು ಮೂಡಿಸುವಾಸೆ

ಹತಾಶೆಯಾದಮನಸ್ಸಿಗೆಭರವಸೆಯಾಗೊವಾಸೆ
ಒಡಲಾಳದ ತುಡಿತವನ್ನು ಹೊರಹೊಮ್ಮುವಾಸೆ
ಜನರ ಹೃದಯಗಳನ್ನು ತಣಿಸುವಾಸೆ
ಒಡೆದ ಮನಗಳನ್ನು ಬೆಸೆಯುವಾಸೆ

ದೂರಾದ ಪ್ರೇಮಿಗಳನ್ನು ಒಂದಾಗಿಸುವಾಸೆ
ಜಾತಿ ಮತವೆನ್ನುವವರ ಜೊತೆಗೂಡಿಸುವಾಸೆ
ಮನುಜಮತ ವಿಶ್ವ ಪಥ ಸಾರುವಾಸೆ
ಜಗಜ್ಜನರಿಗೆ ಮಾನವತೆಯ ಮಂತ್ರವಾಗುವ ಆಸೆ


About The Author

3 thoughts on “ನಾರಾಯಣ ರಾಠೋಡ-ಕವಿತೆಯಾಗೊ ಆಸೆ”

Leave a Reply

You cannot copy content of this page

Scroll to Top