ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆದಿ ಮಾನವ

ಡಾ.ಶಿವಕುಮಾರ್ ಮಾಲಿಪಾಟೀಲ

ಮೈ ಮೇಲೆ ಏನೂ ತೊಡದೆ
ಕಾಡು ಮೇಡು ಅಲೆಯುತ್ತಾ
ಪ್ರಾಣಿಗಳ ಜೊತೆಗೆ ಪ್ರಾಣಿಯಾಗಿದ್ದ

ಹೊಟ್ಟೆಗೆ ಗಡ್ಡೆ ಗೆಣಸು ,
ಹಸಿ ಮಾಂಸ ತಿನ್ನುತ್ತಿದ್ದ , ಮಾಂಸಹಾರ ಕನಿಷ್ಟ , ಸಸ್ಯಹಾರ ಶ್ರೇಷ್ಠ ಎಂಬುದು ತಿಳಿಯದವನಾಗಿದ್ದ

ಪ್ರಜ್ಞೆ ಬೆಳೆದಂತೆ‌‌‌‌..‌
ಮೈ ಮೇಲೆ ಎಲೆ ,ಬಳ್ಳಿ ಸುತ್ತಿಕೊಂಡು ಕಾಡಿನ ರಾಜನಾದ…

ಪೊದೆ ,ಅರಣ್ಯೆ ,ಗುಹೆ ಬಿಟ್ಟು ಗುಡಿಸಲು ಕಟ್ಟಿ ತನ್ನದೆ ಸಂಗಾತಿ ಜೊತೆಗೆ ವಾಸಿಸತೊಡಗಿದ

ಏನೆನೂ ಕೈ ,ಬಾಯಿ ಸೊನ್ನೆ ಮಾಡಿ ವ್ಯವಹರಿಸಿ ಅದನ್ನೆ ಭಾಷೆ ಮಾಡಿಕೊಂಡ,
ಹಾಡು‌,ಮಂತ್ರ ಹೇಳೆದ

ಮೈ ಬಣ್ಣ ಕಪ್ಪು ,ಬಿಳುಪು ,ಕಂದು ಎಂದು ಬದಲಾಗುತ್ತಾ ಭಾಗವಾಗುತ್ತ ಸಾಗಿದ

ತನಗೆ ಹುಟ್ಟಿದ ಮಕ್ಕಳಿಗೆ ಏನು ಆಗಬಾರದೆಂದು ಕಲ್ಲು ,ಮಣ್ಣು ,ಕಟ್ಟಿಗೆ ದೇವರು ಮಾಡಿ ಪೂಜಿಸತೊಡಗಿದ

ತನಗೆ ಸಹಾಯ ಮಾಡುವ ಗೋವು ,
ತೊಂದರೆ ಕೊಡುವ ಹಾವುಗಳನ್ನು ಪೂಜಿಸಿ ದೇವರನ್ನಾಗಿಸಿದ

ತಮಗೆ ಮಾರ್ಗದರ್ಶನ ತೋರಿದ
ಗುರುಗಳನ್ನು ಹಿಂಬಾಲಿಸಿ ಅವರು ತೋರಿದ ದಾರಿಗೆ ಧರ್ಮ ಎಂದ

ದಾರ್ಶನಿಕರಿಂದ ಆಕಾರ ,ನಿರಾಕಾರದಲ್ಲಿ ದೇವರನ್ನು ಹುಡುಕುವ ಸರಳ ಮಾರ್ಗ ಪಡೆದುಕೊಂಡ

ತಪ್ಪು ,ಪಾಪ ,ಕರ್ಮಗಳಿಗೆ ಕಡಿವಾಣ ಹಾಕಲು ದೇವರ ಭಯ,
ಧರ್ಮದ ಕಟ್ಟುಪಾಡುಗಳ ಮೊರೆಹೊದ

ಆದಿ ಮಾನವ ಬೆತ್ತಲೆಯಾಗಿದ್ದರೂ
ಅತ್ಯಾಚಾರ ಮಾಡಲಿಲ್ಲ ,
ಅಜ್ಞಾನಿಯಾಗಿದ್ದರೂ
ಆಸ್ತಿ ,ಅಧಿಕಾರಕ್ಕಾಗಿ ‌ಹೊಡೆದಾಡಲಿಲ್ಲ ,
ಶುಭ ಗಳಿಗೆಗಾಗಿ ಕಾಯಲಿಲ್ಲ
ವಾಸ್ತು , ಪಂಚಾಂಗ ನೋಡಲಿಲ್ಲ
ಧರ್ಮಗಳಿಗಾಗಿ
ಪ್ರಾಣ ಬಿಡಲಿಲ್ಲ,,
ರೋಗದಿಂದ ಬಳಲಲಿಲ್ಲ ,
ಒತ್ತಡದಲ್ಲಿ ಸಾಯಲಿಲ್ಲ

ಆದಿ ಮಾನವನಿಂದ ಮುಂದುವರೆಯುತ್ತಾ ,
ಮುಂದುವರೆಯುತ್ತಾ…
ಆಧುನಿಕ ಮಾನವನಾದ…
ಜಾತಿ , ಧರ್ಮಗಳ
ಬಣ್ಣ ,ಬಣ್ಣದ ಬಟ್ಟೆ ಹಾಕಿಕೊಂಡ …..
ಧರ್ಮ ಬೆತ್ತಲೆಯಾಯಿತು…
ಹೊರಗೆ ಬೆಳಕು ಕಂಡ
ಒಳಗೆ ಕತ್ತಲೆ ಆವರಿಸಿತು…

‌———————

About The Author

1 thought on “ಡಾ.ಶಿವಕುಮಾರ್ ಮಾಲಿಪಾಟೀಲ-ಆದಿ ಮಾನವ”

  1. ಆದಿ ಮಾನವನಿದ್ದಾಗಲೇ ಹಸಿವಿಗಾಗಿ ಬಡಿದಾಡುತ್ತಾ ಇದ್ದ. ಆದರೆ ಆಧುನಿಕ ಮಾನವನಾದಾಗ ಆಸೆಗಳು, ಪ್ರತಿಷ್ಠೆ, ಅಧಿಕಾರ ಅನ್ನುವ ಹಠಕ್ಕೆ ಬಿದ್ದು ಮನುಷ್ಯತ್ವವನ್ನೆ ಕಳೆದುಕೊಂಡ.

Leave a Reply

You cannot copy content of this page

Scroll to Top