ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವರದಿ

೨೨ನೇ ಅಖಿಲ ಭಾರತ

ಕವಯತ್ರಿಯರ ಸಮ್ಮೇಳನ ಜನವರಿ  ೨೮,೨೯,೩೦

ಮೊದಲ ದಿನದ ಉದ್ಘಾಟನೆ

೨೨ನೇ ಅಖಿಲ ಭಾರತ ಕವಯತ್ರಿಯರ ಸಮ್ಮೇಳನವು ಜನವರಿ ೨೮,೨೯,೩೦,
ಕರ್ನಾಟಕದ ಬೆಳಗಾವಿಯಯ ಎಸ್.ಜಿ.ಬಾಳೆಕುಂದರಗಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೊದಲ ದಿನ . ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮತಿ ಮಂಗಲಾ ಅಂಗಡಿ ಲೋಕಸಭಾ ಸದಸ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೀಲಾದೇವಿ ಆರ್ ಪ್ರಸಾದ್, ಡಾ.ವಿ.ಎಲ್.ಕೋಸಗಿ, ಅವರು ಆಗಮಿಸಿದ್ದರು.ಅಖಿಲ ಭಾರತ ಕವಿತ್ರಿಯರ ಸಮ್ಮೇಳನ (AIPC all
India poetess conference)
ಸಂಸ್ಥಾಪಕ ಅಧ್ಯಕ್ಷ ಡಾ. ಲಾರಿ ಆಝಾದ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಸಮ್ಮೇಳನದ ಮುಂದಾಳತ್ವ ವಹಿಸಿರುವ ಜ್ಯೋತಿ ಬಾದಾಮಿ ಯವರು. ಉಪಸ್ಥಿತರಿದ್ದರು.
ಜ್ಯೋತಿಯನ್ನು ಬೆಳಗಿಸುವ ಮೂಲಕ
ಕಾರ್ಯಕ್ರಮ ಉದ್ಘಾಟಿಸಿಲಾಯಿತು. ನಾರಿಶಕ್ತಿ ಪ್ರಕೃತಿ souvenir ಬಿಡುಗಡೆ ಮಾಡಲಾಯಿತು
ಸಮ್ಮೇಳನದ ಮುಖ್ಯ ಆಕರ್ಷಣೆ
ಬಹಳ ಜನ ಹಿರಿಯ ಕಿರಿಯ ಕವಯಿತ್ರಿಯವರ, ಬೇರೆ ಭಾಷೆಯ ಹಲವಾರು ಪುಸ್ತಕ ಲೋಕಾರ್ಪಣೆಗೊಂಡವು.ದೇಶದ ಬೇರೆ ಬೇರೆ ರಾಜ್ಯಗಳಿಂದ ಕವಯತ್ರಿಯರ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.
AIPC ಸದಸ್ಯರಾದ ಡಾ. ನಿರ್ಮಲ ಬಟ್ಟಲ ಅವರ ಭಾವಾವಲೋಕನ ವಿಮರ್ಶಾ ಕೃತಿ ಲೋಕಾರ್ಪಣೆಗೊಂಡಿತು.


ವರದಿ

ಡಾ.ನಿರ್ಮಲಾ ಬಟ್ಟಲ

About The Author

Leave a Reply

You cannot copy content of this page

Scroll to Top