ಶಿಲ್ಪ ಸಂತೋಷ್ ಕವಿತೆ-ಕಾದಿರುವಳು ರಾಧೆ:

ಕಾವ್ಯ ಸಂಗಾತಿ

ಕಾದಿರುವಳು ರಾಧೆ

ಶಿಲ್ಪ ಸಂತೋಷ್

ಹುಣ್ಣಿಮೆಯ ರಾತ್ರಿ ಮೊರೆವ ಕಡಲು
ಕಡಲ ತೀರದ ಅಲೆಗಳಂತೆ
ಅವಳ ಮನವು ಇರಲು
ನೀನೆಲ್ಲಿರುವೆ ಶ್ಯಾಮಾ…
ಕಾದಿರುವಳಲ್ಲಿ ರಾಧೆ ಕಡಲ ತೀರದಲ್ಲಿ…

ಬೆಳಗು ಸುರಿದಾಗ ಚದುರಿದ ಮೋಡಗಳು
ಇರುಳಾಗುತ್ತಲೇ ದಟ್ಟೈಸುತ್ತವೆ
ಮಳೆಯಾಗಿ ಸುರಿಯುತ್ತವೆ
ಅವಳ ಕಂಗಳಲ್ಲಿ.
ನೀನೆಲ್ಲಿರುವೆ ಶ್ಯಾಮಾ…
ಕಾದಿರುವಳಲ್ಲಿ ರಾಧೆ ಕಾರಿರುಳಲ್ಲಿ…

ತಿನ್ನುವ ಅನ್ನದ ಅಗುಳು ರುಚಿಸುವುದಿಲ್ಲ
ನೋಡುವ ನೋಟಗಳಲ್ಲಿ ಹೊಸತನವಿಲ್ಲ.
ನೀನೆಲ್ಲಿರುವೆ ಶ್ಯಾಮಾ…‌
ಕಾದಿರುವಳು ರಾಧೆಯಿಲ್ಲಿ
ಪ್ರತೀದಿನ ಹೊಸಬನಾಗುವ ನಿನಗಾಗಿ…

ಕನಸಲ್ಲಿ ತುಂಬಿರುವೆಯಂತೆ
ನನಸಾಗದ ಕನಸೇ ನೀನು
ಕನಸಿನ ಬೆನ್ನತ್ತಿ ಹೊರಟ ರಾಧೆಗೆ
ದಿಕ್ಕುಗಾಣಿಸೆಯಾ
ನೀ ಎಲ್ಲಿರುವೆ ಶ್ಯಾಮಾ…
ದೊರಕಿಯೂ ನಿಲುಕದ ನಿನಗೆ
ಯಾವಾಗಲೂ ಕಾಯುವಳು
ಈ ರಾಧೆ…


About The Author


Comments

One response to “ಶಿಲ್ಪ ಸಂತೋಷ್ ಕವಿತೆ-ಕಾದಿರುವಳು ರಾಧೆ:”

  1.  Avatar
    Anonymous

    ತುಂಬಾ ಚೆನ್ನಾಗಿದೆ

Leave a Reply

You cannot copy content of this page