ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೆಪಲ್ಲಿ ಕೃಷ್ಣಮೂರ್ತಿ

ಬಾಗೇಪಲ್ಲಿಯವರ ಗಜಲ್

ಸಂಭ್ರಮಿಗಳೇ,
I lost all my life in living only (ಇಡೀ ಜೀವನ ಜೀವಿಸುವುದರಲೇ ಕಳೆದೆ) ಎಂಬ ಮಾತಿದೆ.
ಬೆಳಗಿನ ಸೈಕ್ಲಿಂಗ್ ಕೆರೆಯಕಡೆ
ಹೋಗಿದ್ದೆ. ಹಿಂದೆ ನೋಡಿದ್ದ ಈಚಲಮರಕ್ಕೆ ಜೋತಾಡಿದ್ದ ಗೀಜುಗ ಗೂಡು ನೋಡಲು ಹೋದೆ. ಹಕ್ಕಿ ಕಾಣಲಿಲ್ಲ, ಯಾವುದೋ ವೇದಿಕೆಗೆ ಸಿಂಗರಿಸಲು ಗೀಜಗನ ಗೂಡು ಕೀಳಲೆತ್ನಿಸುವ ಹಲವು ಹುಡುಗರ ಕಂಡು ಅದರ ಜೀವನ ಕ್ರಮ ತಿಳಿಹೇಳಿದೆ. ಆದರೆ ಆಗ ಬೇಕಾದ ಅನಾಹುತ ಆಗಿಹೋಗಿತ್ತು. ಗೀಜುಗ ಮಾನವನು ಮುಟ್ಟಿದ ಗೂಡಲಿ ವಾಸಿಸದು.

***

ಮತ್ಲಾಗಜಲ್ ಬರೆಯುವ ಉಧ್ಧೇಶವಿರಲಿಲ್ಲ

ಗಜಲ್

ಗುಲಾಬಿ ಅಡಿಯಲಿ ಚೂಪನೆ ಮುಳ್ಳು ಇರುತ್ತದೆ ಗೀಜುಗ.
ಚಂದವನು ಬಯಸುವಾಗ ಎಚ್ಚರಿಕೆ ನೀಡುತ್ತದೆ ಗೀಜುಗ

ಈಚಲ ಗಿಡದ ಎಲೆ ಕೊನೆ ಮುಳ್ಳು ಆಗಿರುತ್ತದೆ ಗೀಜುಗ
ನಿನ್ನ ಜೀವನ ಮುಳ್ಳೊಂದಿಗೆ ಸ್ನೇಹ ಮಾಡುತ್ತದೆ ಗೀಜುಗ

ವಂಶಾಭಿವೃದ್ಧಿಗಾಗಿ ವಿಧಿ ಎಷ್ಟು ಕಷ್ಟ ಕೊಡುತ್ತದೆ ಗೀಜುಗ
ಒಪ್ಪದಿರೆ ಬೇಡ ಕಟ್ಟಿದ ಗೂಡಿನ್ನು ಏಕೆ ಕೆಡಹುತ್ತದೆ ಗೀಜುಗ

ಗಂಡು ಹಕ್ಕಿ ಹೆಣ್ಣ ಬಗ್ಗೆ ಅದೆಷ್ಟು ಕಾಳಜಿ ವಹಿಸುತ್ತದೆ ಗೀಜುಗ
ಗೂಡು ಬೆಳಗಲೆಂದು ಮಿಣುಕು ಹುಳವ ತಂದಿಡುತ್ತದೆ ಗೀಜುಗ

ಚಂದದ್ದೆಲ್ಲವ ಬಯಸುವ ಪಿಶಾಚಿ ಕೈಗೆ ತಾಗುತ್ತದೆ ಗೀಜುಗ
ಕೃಷ್ಣಾ ಆ ವರ್ಷದ ಶ್ರಮವೆಲ್ಲಾ ಹಾಳುಗೊಡುತ್ತದೆ ಗೀಜುಗ.


About The Author

Leave a Reply

You cannot copy content of this page

Scroll to Top