ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮುಗಿಲ ಮಲ್ಲಿಗೆ…. (ವರಕವಿ ನೆನಪಲ್ಲಿ)

ಅಕ್ಷತಾ ಜಗದೀಶ

ಸಾಧಿಸಲೇಂದೆ ಜನ್ಮತಳೇದ
ಸಾಧನಕೇರಿಯ ಈ ಕುವರ
ವರಕವಿಯಾಗಿ ಕನ್ನಡ ತಾಯಿಯ
ಸೇವೆಗೈದು…
ಮನಮಿಡಿಯುವ ಭಾವಗೀತೆಗೆ
ಸರದಾರನಾದರು….

ಕವನಗಳಲ್ಲೆ ಕುಣಿಯೋಣವೆಂದ
ಅವಧೂತ ಕವಿ…
ಪಾತರಗಿತ್ತಿ ಪಕ್ಕ ಪದರಚಿಸಿದ
ರಸ ಋಷಿ….
ಯುಗಾದಿಯ ಸವಿಉಣಿಸಿದ
ವರಕವಿ…
ಪ್ರೀತಿ.. ಪ್ರೇಮದ ಪರಿತಿಳಿಸಿದ
ಚೇತೋಹಾರಿ ಕವಿ…
ಚಿತ್ತಿಯ ಮಳೆಯ ಸಂಜೆಗೆ
ಕರೆದೊಯ್ದ ದಾರ್ಶನಿಕ ಕವಿ…

ನಾಕುತಂತಿಯ ನಾಡಿಗೆ ನೀಡಿದ
ಸಾಹುಕಾರ…
ಅರಳು ಮರಳು ಎನ್ನುತಲೇ
ಒಲವೇ ನನ್ನ ಬದುಕು ಎಂದ
ಮಹಾನ್ ಚೇತನ…
ಮೇಘಧೂತದ ನಾದಲೀಲೆ ಹೊರಡಿಸಿ
ಮುಗಿಲ ಮಲ್ಲಿಗೆ ಮೇಲೆ
ಕಾಮಕಸ್ತೂರಿಯ ಉಯ್ಯಾಲೆ ತೂಗಿಸಿದ
ವಿನಯವಂತರು..
ಅಂಬಿಕಾತನಯದತ್ತರು…

ಮರೆಯಲಾಗದ ಹಾಡುಗಳ
ಸವಿಯುಣಿಸಿ..
ಹೃದಯ ಸಮುದ್ರದ ಮೇಲೆ
ನೆನಪುಗಳ ಗರಿ ಬಿಡಿಸಿ
ಮುಗಿಲ ಮಲ್ಲಿಗೆಯಾದ
ಬೇಂದ್ರೆಯವರೇ..
ನಿಮಗಿದೋ ಜನುಮ ದಿನದ
ಶುಭಾಶಯಗಳು…..——


About The Author

1 thought on “ಅಕ್ಷತಾ ಜಗದೀಶ-ಮುಗಿಲ ಮಲ್ಲಿಗೆ…. (ವರಕವಿ ನೆನಪಲ್ಲಿ)”

Leave a Reply

You cannot copy content of this page

Scroll to Top