ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೇಳದ ಮಾತು

ಯ.ಮಾ.ಯಾಕೊಳ್ಳಿ

ಎಷ್ಟೊ ದೂರ ಬಂದೆವೀಗ
ನಮಗೆ ಏನೂ ತಿಳಿಯದೆ
ಮರೆತು ಹೇಗೆ ಹೋಗೋದೀಗ
ನಿಂತೆವಿಲ್ಲಿ ತಿಳಿಯದೆ

ಏಕೆ ಬಂತೋ ಹೇಗೇ ಬಂತೋ
ಈ ಜನುಮದೊಲವು
ಮಾತು ವಿವರಣೆಗತೀತವು
ಏನು‌ ಇದರ ಮಜವು

ಹೇಳದೆನೆ ಕೇಳದೇನೆ ಮನವು
ನೆನೆವುದು ಆ ಹೃದಯವ
ಹೇಗೆ ತಡೆಯಲಿ ಸಾಗರದ ಕಡೆ
ಓಡೊವಂತ ನದಿಯ

ದೂರ ಸರಿಯೊ ದಾರಿ‌ ಕಾಣದೆ
ಚಡಪಡಿಸಿದೆ ಜೀವ
ಮರೆಯಲಾರೆ ,ಬಿಟ್ಟು
ಇರಲೂ ಆಗದ ತಹತಹ

ಲೋಕವೆಂದು ಒಪ್ಪದಂಥ
ಸಂಕೀರ್ಣ ಬಂಧವು
ಮನವು ಮಾತ್ರ ಬೇಡೊದಿದನು
ಏನು ಚಂದವು


About The Author

1 thought on “ಯ.ಮಾ.ಯಾಕೊಳ್ಳಿಯವರಕವಿತೆ-ಹೇಳದ ಮಾತು”

Leave a Reply

You cannot copy content of this page

Scroll to Top