ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ಸುತ್ತಲ ಜನಕೆ ನಿನ್ನ ಅವಶ್ಯವು ಯಾರಿಗೆ ಎಷ್ಟಿದೆಯೆಂದ ನೀನರಿಯೆ
ನಿನ್ನೊಂದು ಕಿರುನಗೆಯ ಅಗತ್ಯವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ಪ್ರಾಂಶಾಂತ ಚಿತ್ತ ಏಸುಪ್ರಭುವ ನೆನೆಯುತ ಪ್ರಾರ್ಥಿಸುವ ದಿನಗಳಿವು
ನಿನ್ನ ಕರುಣಾ ನೋಟದ ಹಂಬಲವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ಸೌಹಾರ್ದ,ಸಹಬಾಳ್ವೆಗಳೇ ಜಗತ್ತಿಗೆ ಇಂದಿಗೆ ಜರೂರು ಬೇಕಿರುವ ಅಂಶಗಳು
ಆವಶ್ಯವಾಗಿ, ನಿನ್ನ ಬಿಗಿ ಅಪ್ಪುಗೆ ತಾಪವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ಅಯ್ಯಾ ಎಂದರೆ ಸ್ವರ್ಗ, ಎಲವೋ ಎನ್ನಲು ನರಕವೆಂದು ಹೇಳುವರು
ನಿನ್ನ ಸಾಂತ್ವನದ ನುಡಿಯ ಹಸಿವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ನೆರವಾಗುವ ಅವಕಾಶ ಕೈ ಬಿಡದಿರು ಹಾಗಯೇ ಮುಂದೂಡಲೂ ಬೇಡ
ಕೃಷ್ಣಾ! ಸಹಜೀವಿಗಳಿಗೆ ನಿನ್ನ ಋಣವು ಯಾರಿಗೆ ಎಷ್ಟಿದೆಯೆಂದು ನೀನರಿಯೆ


About The Author

Leave a Reply

You cannot copy content of this page

Scroll to Top