ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಶ್ವಮಾನವ

ಕಾಡಜ್ಜಿ ಮಂಜುನಾಥ

ಕನ್ನಡ ಕಾವ್ಯ ಲೋಕದ
ಮೇರು ಪರ್ವತ!
ಮಲೆನಾಡಿನ ಹಸಿರಿನ
ಸಂಜಾತ!
ನಿಸರ್ಗದ ಒಲವಿನ ಅಭಿಜಾತ
ಮೂಢನಂಬಿಕೆಯ ನಿಷ್ಠುರವಾಗಿ
ವಿರೋಧಿಸಿದಾತ!
ಸಮಾಜದ ಏರುಪೇರುಗಳ
ವಿಚಾರದಿ ಜಾಡಿಸಿದಾತ!
ಕಾವ್ಯ ಗಂಗೆಯ ಜಗಕ್ಕೆಲ್ಲಾ
ಹರಿಸಿದಾತ !
ಕಥೆ,ಕವಿತೆ, ಕಾದಂಬರಿ,ನಾಟಕ,
ಮಹಾಕಾವ್ಯ
ಸಾಹಿತ್ಯದ ಮಳೆ
ಸುರಿಸಿದಾತ !
ಕನ್ನಡದೇವಿಯ ಹೆಮ್ಮೆಯ
ಹಿರಿಯ ಮಗನೀತ !
ಕನ್ನಡವ ಪ್ರತಿಯುಸಿರಲಿ ಉಸಿರಾಡಿ
ಜೀವಿಸಿ ಉಳಿದಾತ !
ಮಮತೆಯ ಮಡಿಲಲಿ ಮಾನವೀಯತೆ
ದೀಪವ ಬೆಳಗಿಸಿದಾತ !
ಯುಗದ ಜಗದ ಕವಿಯಾಗಿ
ರಸಋಷಿಯಾದಾತ
ಮನ ಮನಗಳು ಬೆಸೆದು
ವಿಶ್ವಮಾನವ ಸಂದೇಶ
ಸಾರಿದಾತ !
ಕನ್ನಡ ನಾಡು ಎಂದೂ
ಮರೆಯದ ದೈವಾಂಶ
ಸಂಭೂತ !


About The Author

2 thoughts on “ಕಾಡಜ್ಜಿ ಮಂಜುನಾಥ ಕವಿತೆ-ವಿಶ್ವಮಾನವ”

Leave a Reply

You cannot copy content of this page

Scroll to Top