ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆಶಾ ಯಮಕನಮರಡಿಯವರ ಗಜಲ್

B

ಪ್ರೀತಿಸಿದೆ ಎಂದ ಮಾತ್ರಕ್ಕೆ ನನ್ನತನ ತೊರೆದಿಲ್ಲ ತಿಳಿದುಕೊ
ಸ್ವಾಭಿಮಾನದಿ ಬದುಕುವಾ ಕಲೆ ಯನ್ನು ಮರೆತಿಲ್ಲ ತಿಳಿದುಕೊ

ಎಲ್ಲವನು ಎದುರಿಸಿ ಬದುಕುವುದುಸುಲಭವಲ್ಲ ಗೊತ್ತು ನನಗೆ
ಯಾರಿಲ್ಲದಿದ್ದರು ಜಗವೇನು ನಿಲ್ಲುವುದಿಲ್ಲ ತಿಳಿದುಕೊ

ಮುಸುಕಿನ ಗುದ್ದಾಟದಲಿ ವ್ಯರ್ಥವಾದವು ದಿನಗಳೆಷ್ಟೊ
ಇರುಳಿನಾ ಸತ್ಯಗಳನ್ನು ಯಾರೂಅರಿಯದವರಿಲ್ಲ ತಿಳಿದುಕೊ

ಎಷ್ಟು ದಿನ ತಡೆಯಲಾದೀತು ಒಳಮನದ ಬೇಗುದಿಯನು
ಎದೆಯಾಳದ ಲಾವಾ ಚಿಮ್ಮಿದರೆಏನೂ ಉಳಿಯುವುದಿಲ್ಲ ತಿಳಿದುಕೊ

ಸಾತ್ವಿಕತೆಯ ಸೋಗು ಸಾಕಿನ್ನು ಬಿಟ್ಟುಬಿಡು ನಿನಗೆ ಶೋಭಿಸದು
ಆಶಾ ಳ ಕನಸುಗಳು ಎಂದೂ ಸೋಲುವುದಿಲ್ಲ ತಿಳಿದುಕೊ


About The Author

1 thought on “ಆಶಾ ಯಮಕನಮರಡಿಯವರ ಗಜಲ್”

Leave a Reply

You cannot copy content of this page

Scroll to Top