ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಶಸ್ತಿ

ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ

ಐದು ಕೃತಿಗಳ ಆಯ್ಕೆ ಹಾಗೂ ವಿವಿಧ ಕ್ಷೇತ್ರದ ಐವರು ಸಾಧಕರಿಗೆ ವಿಶೇಷ ಗೌರವ ಪುರಸ್ಕಾರ

ಕಳೆದ ಎಂಟು ವರ್ಷಗಳಿಂದ  ತಂದೆಯ ಸ್ಮರಣಾರ್ಥವಾಗಿ ನಡೆಯಿಸಿಕೊಂಡು ಬಂದ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಾಜ್ಯ ಮಟ್ಟದಲ್ಲಿ ಪುರಸ್ಕಾರ ನೀಡಲು ವಿವಿಧ ಪ್ರಕಾರದ ಕೃತಿಗಳನ್ನು ಅಹ್ವಾನಿಸಲಾಗಿತ್ತು. ನೂರಾರು ಕೃತಿಗಳು ಪುರಸ್ಕಾರದ ಪರಿಶೀಲನೆಗೆ‌ ಬಂದಿದ್ದವು.ಆ ಎಲ್ಲ ಕೃತಿಗಳು ಕಳಿಸಿದ ಲೇಖಕ ಲೇಖಕಿಯರಿಗೆ ಧನ್ಯವಾದಗಳು.ಬಹುತೇಕ ಕೃತಿಗಳು ಪುರಸ್ಕಾರಕ್ಕೆ ಅರ್ಹವೇ ಇದ್ದವು.ಆದರೆ ಅದರಲ್ಲಿ ಈ ಕೆಳಕಂಡ ಲೇಖಕ-ಲೇಖಕಿಯರ ಐದು ಕೃತಿಗಳು‌ ಅಂತಿಮ ಸುತ್ತಿನಲ್ಲಿ ಆಯ್ಕೆ ಸಮಿತಿಯ ಮೂಲಕ ಆಯ್ಕೆಯಾಗಿದ್ದು ಬರುವ ಡಿಸೆಂಬರ್ ೧೧ ರಂದು ರವಿವಾರ ಕನ್ನಡ ಸಾಹಿತ್ಯ ಪರಿಷತ್ ಭವನ ಶಹಾಪುರದಲ್ಲಿ ಮು.೧೦-೩೦ ಗಂಟೆಗೆ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಥೆಗಾರ ಬಸವಣ್ಣೆಪ್ಪ ಕಂಬಾರ ಬೆಳಗಾಂ ಜಿಲ್ಲೆ ಅವರ ಆರನೇ ಬೆರಳು ಕಥಾಸಂಕಲನ

ಲೇಖಕಿ ಮಮತಾ ಅರಸಿಕೆರೆ ಹಾಸನ ಅವರ ಒಳಗೂ ಹೊರಗೂ ಅವರ ಮಹಿಳಾ ಸಂವೇದನೆ ಬರಹಗಳ ಸಂಕಲನ

ಡಾ.ಶಿವರಾಮ ಅಸುಂಡಿ ಧಾರವಾಡ ಅವರ ಚಿತ್ರಂ ಭಳಾರೆ ವಿಚಿತ್ರಂ ಲಲಿತ ಪ್ರಬಂಧ ಸಂಕಲನ

ಲೇಖಕ ಅಬ್ದುಲ್ ಹೈ ತೋರಣಗಲ್ಲು ಬಳ್ಳಾರಿ ಅವರ ಆತ್ಮ ಧ್ಯಾನದ ನಾದ ಗಜಲ್ ಸಂಕಲನ

ಹಿರಿಯ ಲೇಖಕ ಸಂಗಮೇಶ ಬಾದವಾಡಿಗಿ ಬೆಂಗಳೂರು ಅವರ ರೊಟ್ಟಿ ಪಂಚಮಿ ಕಾವ್ಯ ಸಂಕಲನ

ಹೀಗೆ ಈ ಐದು ಕೃತಿಗಳು ಹಾಗೂ ಈ ಕೃತಿಗಳ ಲೇಖಕರಿಗೆ ಪ್ರಶಸ್ತಿಯ ಜೊತೆಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ,ನೆನಪಿನ ಕಾಣಿಕೆ ಹಾಗೂ ವಿಶೇಷ ಸನ್ಮಾನ ಮಾಡಿ ಗೌರವಿಸಲಾಗುವುದು.

ಇನ್ನೂ ಈ ವರ್ಷದಿಂದ ಅಗಲಿದ ತಾಯಿಯ ಸ್ಮರಣಾರ್ಥ ಆರಂಭಿಸಲಾದ ವಿಶೇಷ ಗೌರವ ಪುರಸ್ಕಾರಕ್ಕೆ ಈ ಕೆಳಗಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರ್ತಿಸಲಾಗಿದೆ.

ಶರಣು ಬಿ ಗದ್ದುಗೆ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ಅಧ್ಯಕ್ಷರು-ಹಾಗೂ ಕಾಯಕ ದಾಸೋಹಿ ಮಹಾತ್ಮ ಚರಬಸವ ಸಂಸ್ಥಾನದ ಕುಡಿ ಶಹಾಪುರ ಇವರ ನಾಡು ನುಡಿ ಒಟ್ಟಾರೆ ಕನ್ನಡ ಸೇವೆಗಾಗಿ

ಡಾ.ಸತೀಶ ಹೊಸಮನಿ ಬೀದರ. ನಿರ್ದೇಶಕರು ಕೇಂದ್ರ ಗ್ರಂಥಾಲಯ ಇಲಾಖೆ ಬೆಂಗಳೂರು ಅವರ ಜಾಗತಿಕ ಮಟ್ಟದ ಅಪೂರ್ವ ಡಿಜಿಟಲ್ ಸೇವೆ ಹಾಗೂ ಸಾಧನೆಗಾಗಿ

ಶ್ರೀ ಚೆನ್ನಾರೆಡ್ಡಿ ಎಂ.ಪಾಟೀಲ ಕುರುಕುಂದಾ ಶಹಾಪುರ ತಾಲೂಕಾ, ಅಧ್ಯಕ್ಷರು,ಸರ್ವಜ್ಞ ಶಿಕ್ಷಣ ಸಂಸ್ಥೆ ಕಲಬುರ್ಗಿ ಇವರ ಅಪಾರ ಶಿಕ್ಷಣ ಕ್ಷೇತ್ರದ, ಹಾಗೂ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಉನ್ನತ ಸೇವೆ ಹಾಗೂ ಸಾಧನೆಗಾಗಿ

ಪ್ರಭುಲಿಂಗ ನೀಲೂರೆ ಆಳಂದ.ಬಾಲವಿಕಾಸ ಅಕಾಡೆಮಿಯ ಚಂದಿರ ಪ್ರಶಸ್ತಿ ಪುರಸ್ಕೃತ ಬಹುಮುಖಿ ಪ್ರಕಾರದ ಲೇಖಕ.ಇವರ ಸಾಂಸ್ಕೃತಿಕ,ಸಾಹಿತ್ಯಿಕ ಹಾಗೂ ಪತ್ರಿಕಾ ಸೇವೆಯ ಸಾಧನೆಗಾಗಿ.ಇವರು ಕರ್ನಾಟಕ ಸರ್ಕಾರವೇ ಶ್ರೀ ವಿಜಯ ಪುರಸ್ಕಾರ‌ ನೀಡುವಂತೆ ಮಾಡಿದ ಗಟ್ಟಿಗ

ಬಿ.ಎಸ್.ನಿರಗುಡಿ, ಪ್ರಾಚಾರ್ಯರು ಸತ್ಯಂ ಶಿಕ್ಷಣ ಸಂಸ್ಥೆ, ಹಾಗೂ ಸಂಪಾದಕ ಸಾಹಿತ್ಯ ಸಾರಥಿ ಪತ್ರಿಕೆ ಕಲಬುರ್ಗಿ ಇವರ‌ ಸಾಹಿತ್ಯಿಕ, ಸಾಂಸ್ಕೃತಿಕ ಸಾಧನೆಗಾಗಿ

ಹೀಗೆ ಐದು ಜನಮುಖಿ ಸಾಧಕರಿಗೆ‌ ಇದೇ‌ ಸಂದರ್ಭದಲ್ಲಿ ವಿಶೇಷ ಗೌರವ‌ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು‌ ಶ್ರೀ‌ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಯ್ಕೆ ಸಮಿತಿಯ ಪರವಾಗಿ ಲೇಖಕ ಸಿದ್ಧರಾಮ ಹೊನ್ಕಲ್ ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.ಅಲ್ಲದೆ‌ ಈ ಪುರಸ್ಕೃತರಿಗೆ ಅವರ ಸಹೋದರರಾದ‌ ವಿಜಯಕುಮಾರ್ ಹೊನ್ಕಲ್,ಜಗದೀಶ ಹೊನ್ಕಲ್, ಮತ್ತು ಪ್ರತಿಷ್ಠಾನದ ಕಾರ್ಯದರ್ಶಿ ಬಸವಪ್ರಭು ಹೊನ್ಕಲ್ ಹಾಗೂ ಆಯ್ಕೆ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.


ಸಿದ್ಧರಾಮ ಹೊನ್ಕಲ್

About The Author

Leave a Reply

You cannot copy content of this page

Scroll to Top