ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಕನಸುಗಳು

ಡಾ ಡೋ ನಾ ವೆಂಕಟೇಶ

ನೂರೆಂಟು ಕನಸುಗಳು
ಹೊಟ್ಟೆಗೆ ಹಿಟ್ಟಿಂದ
ಜುಟ್ಟಿಗೆ ಮಲ್ಲಿಗೆಯ ತನಕ

ಕನಸುಗಳ ಮತ್ತೆ ಮತ್ತೆ ಆವಕ
ಪುನರಾವರ್ತನ
ಹುಟ್ಟಿಂದ ಶುರುವಾದ
ವಾಕ್ಯ ಮುಗಿಯುವ ಮುನ್ನ
ನೂರೆಂಟು
ಕಾಮ ಸೆಮಿ ಕೋಲನ್
ಅಫಾಸ್ಟ್ರ್ರಸಿ ಗಳ ಮೇಳ!
ಆಶ್ಚರ್ಯ ಸೂಚಕದ ಮುಂದೆ
ಬರೆ ಪ್ರಶ್ನಾರ್ಥಕ ನೋಟ!!

ವಾಕ್ಯ ರಚನೆ ಮಾಡುವ ಮುನ್ನ
ಬೇರೆ ಬೇರೆ
ಸಂಯೋಜಕಗಳ ಕಾಟ
ಬರೆಯ ಹೊರಟ ಕಥೆ ಮುಗಿಯುವ ಮುನ್ನ
ಕಾಲು ಮಡಿಸುಕೊಳ್ಳವ ವ್ಯಥೆ.

ಮಡದಿ ಮಕ್ಕಳ
ಹಿತೈಷಿಗಳ ಹಿತ ಶತೃಗಳ
ಹಾಡು ಹಸೆ
ಪೂರ್ಣ ವಿರಾಮ ಹಾಕುವ
ಮುನ್ನ
ರಾಗ ತಾಳ ಹಿಮ್ಮೇಳ ಮುಮ್ಮೇಳಗಳ
ಸ್ವರಾಂಜಲಿ

ಈಗ ಹೇಳು
ಬದುಕಿದ್ದು ನಿಜವಾ
ಕನಸಿದ್ದು ನಿಜವಾ

ಭ್ರಮಿಸಿದ್ದ ಭುವಿಯಲ್ಲಿ
ಪೂರ್ಣ ಕುಂಭವೋ
ಪೂರ್ಣ ವಿರಾಮವೋ

ನಾನು ನಾನೋ ಅಥವಾ
ನೀನೇ ನಾನೋ !!!

ಕನಸುಗಳ ನನಸುಗಳು


About The Author

14 thoughts on “ಡಾ ಡೋ ನಾ ವೆಂಕಟೇಶ-ಕನಸುಗಳು”

  1. Dr K B SuryaKumar

    ಬರೆದ ಕಥೆ ಮುಗಿಸುವ ಮುನ್ನ ಇನ್ನೊಂದು ಕಥೆಯ ಜಾಡು ಹಿಡಿಯವ ವೆಂಕಣ್ಣ.. ನಿಮಗಿದೋ ನನ್ನ ಮನದಾಳದಿಂದ ವಂದನೆ.

  2. “ಕನಸುಗಳು” ಅತಿ ಸಂದರವಾದ ಕವಿತೆ ವೆಂಕಣ್ಣಾ.
    ಓಳ್ಳೆ ಕನಸುಗಳು ಬರುವುದು ದೇವರದಯೆಯಿಂದ.
    ನಿಮ್ಮ ಕನಸುಗಳು ನನಸಾಗಲೆಂದು ನಮ್ಮೇಲ್ಲರ ಇಚ್ಚೆ.

Leave a Reply

You cannot copy content of this page

Scroll to Top